More

    ಏಪ್ರಿಲ್‌ನಲ್ಲಿ ಭಾರತದ ಸರಕು ರಫ್ತು ಸ್ವಲ್ಪಮಟ್ಟಿಗೆ ಹೆಚ್ಚಳ; ಆಮದು ಕೂಡ ಏರಿಕೆ

    ನವದೆಹಲಿ: ಏಪ್ರಿಲ್ 2024ರ ಏಪ್ರಿಲ್​ನಲ್ಲಿ ಭಾರತದ ಸರಕು ರಫ್ತುಗಳು 34.99 ಶತಕೋಟಿ ಡಾಲರ್​ಗೆ (2,92,189 ಕೋಟಿ ರೂಪಾಯಿ) ಏರಿಕೆಯಾಗಿದೆ.

    ಹಿಂದಿನ ವರ್ಷದ ಏಪ್ರಿಲ್​ ತಿಂಗಳಿನಲ್ಲಿ ಈ ಮೊತ್ತ 34.62 ಶತಕೋಟಿ ಡಾಲರ್​ ಇತ್ತು ಎಂದು ಬುಧವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ.

    ಆಮದು ಕೂಡ 2024ರ ಏಪ್ರಿಲ್​ನಲ್ಲಿ 54.09 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. 2023ರ ಏಪ್ರಿಲ್​ ತಿಂಗಳಲ್ಲಿ ಈ ಮೊತ್ತ 49.06 ಶತಕೋಟಿ ಡಾಲರ್ ಇತ್ತು.

    ವ್ಯಾಪಾರ ಕೊರತೆ ಅಂದರೆ, ಆಮದು ಮತ್ತು ರಫ್ತಿನ ನಡುವಿನ ಅಂತರವು ಈ ತಿಂಗಳಲ್ಲಿ 19.1 ಶತಕೋಟಿ ಡಾಲರ್​ ಇತ್ತು.

    ಮಾಧ್ಯಮಗಳ ಜತೆ ಈ ಅಂಕಿ-ಅಂಶಗಳನ್ನು ಹಂಚಿಕೊಂಡ ವಾಣಿಜ್ಯ ಕಾರ್ಯದರ್ಶಿ ಸುನೀಲ್ ಬರ್ತ್ವಾಲ್ ಅವರು, ಹೊಸ ಆರ್ಥಿಕ ವರ್ಷವು ಉತ್ತಮ ರೀತಿಯಲ್ಲಿ ಪ್ರಾರಂಭವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇದು ಮುಂದುವರಿಯುತ್ತದೆ ಎಂದು ಆಶಿಸಿದರು.

    See also  ರಾಜತಾಂತ್ರಿಕ ಸಿಬ್ಬಂದಿ ಕಡಿತಕ್ಕೆ ಮುಂದಾದ ಕೆನಡಾ ದೆಹಲಿಯಿಂದ ಸಿಂಗಾಪುರ, ಮಲೇಷ್ಯಾಗೆ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts