ಮದುವೆಯೆಂಬ ದುಃಸ್ವಪ್ನ: ಒಟ್ಟಿಗೇ ಸಾವಿನ ಹಾದಿ ತುಳಿದ ಮಂಡ್ಯದ ಅವಳಿ ಸಹೋದರಿಯರು!

death
Published on

ಮಂಡ್ಯ: ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆದ ಈ ಅವಳಿ ಸಹೋದರಿಯರು ಒಟ್ಟಿಗೇ ಸಾವಿನ ಹಾದಿ ತುಳಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂತಿಮ‌ ವರ್ಷದ ಡಿಪ್ಲೊಮಾ‌ ಓದುತ್ತಿದ್ದ ದೀಪಿಕಾ ಮತ್ತು ದಿವ್ಯಾ ಎಂಬ 19 ವರ್ಷ ವಯಸ್ಸಿನ ಈ ಸಹೋದರಿಯರು ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಪ್ರತ್ಯೇಕ ಕೊಠಡಿಗಳಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.

ಇಷ್ಟು ವರ್ಷ ಒಟ್ಟಿಗೇ ಇದ್ದ ಇವರ ಸಾವಿಗೆ ಕಾರಣ ಮದುವೆ ಎನ್ನಲಾಗಿದೆ. ಇವರ ಮದುವೆಗೆ ಮನೆಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿ ಕಳುಹಿಸಲು ತಯಾರಿ ನಡೆಸಲಾಗಿತ್ತು. ಇಷ್ಟು ವರ್ಷ ಜೀವಕ್ಕೆ ಜೀವದಂತಿದ್ದ ತಾವಿಬ್ಬರೂ ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗದ ಈ ಅವಳಿ ಸಹೋದರಿಯರು ಸಾವಿನ ಮೂಲಕ ಒಂದಾಗುವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net