'RRR'... ಇದು ಕೇವಲ ಸಿನಿಮಾ ಅಲ್ಲಾ, ಬಹಳಷ್ಟು ಸಿನಿಪ್ರೇಕ್ಷಕರಿಗೆ ಇದು ಒಂದು ಏಮೋಷನ್ ಎಂದೇ ಹೇಳಬೇಕು. ಬರೋಬ್ಬರಿ ಐದು ವರ್ಷಗಳ ಬಳಿಕ 'ಬಾಹುಬಲಿ' ಚಿತ್ರದ ನಂತರ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಈ 'RRR' ಸಿನಿಮಾ ರಿಲೀಸ್ ಆಗಿದ್ದು, ಚಿತ್ರದ ನಟರಾದ ಜೂ ಎನ್ಟಿಆರ್, ರಾಮ್ ಚರಣ್ ತೇಜ್ ಅವರನ್ನು ಒಟ್ಟಿಗೆ ಪರದೆಯ ಮೇಲೆ ನೋಡಲು ಅಭಿಮಾನಿಗಳು ಮಾತ್ರವಲ್ಲದೇ, ಒಟ್ಟಾರೆ ಸಿನಿಮಾ ಪ್ರೇಮಿಗಳು ಎಲ್ಲರೂ ಮುಗಿಬಿಳುತ್ತಿದ್ದಾರೆ. ಹೌದು, ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನಿರ್ದೇಶಿಸಿದ ಈ 500 ಕೋಟಿ ಬಜೆಟ್ನ ಅದ್ಭುತವಾದ ಸಿನಿಮಾವನ್ನು ಕಣ್ ತುಂಬಿಕೊಳ್ಳುತ್ತಿರುವುದರ ಜತೆಗೆ ಈ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ ವೀಕ್ಷಕರು. ಆದರೆ, ಸಿನಿಮಾವನ್ನು ಸೆಲೆಬ್ರೇಟ್ ಮಾಡುವ ಪ್ರೋಸೆಸ್ನಲ್ಲಿ ಬಹಳಷ್ಟು ಕಡೆ ಅವಘಡಗಳು ಘಟಿಸುತ್ತಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ಅದರಲ್ಲಿಯೂ, ಸಿನಿಮಾದಿಂದಲೇ ಸಿನಿಮಾ ಪ್ರಿಯರು ಜೀವ ಕಳೆದುಕೊಳ್ಳುತ್ತಿರುವದು ತುಂಬಾ ನೋವಿನ ಸಂಗತಿ.