ಬೆಂಗಳೂರು: ಕಾಶ್ಮೀರ್ ಪಂಡಿತರ ಹತ್ಯೆ ಹಾಗೂ ಅವರ ವಲಸೆಯನ್ನು ಆಧರಿಸಿ ತೆಗೆದಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇಡೀ ದೇಶಾದ್ಯಂತ ಗಲ್ಲಾ ಪಟ್ಟೆಗೆ ಉಕ್ಕಿ ಹರಿಯುವಂತೆ ಮಾಡಿದೆ. ಹೌದು, ಕೇವಲ ಏಳು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಬರೋಬ್ಬರಿ 8 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದಿದ್ದು, 100 ಕೋಟಿ ಗಳಿಸಿದೆ ಎಂದು ವರದಿಗಳು ಹೇಳುತ್ತಿವೆ. ಈ ಸಿನಿಮಾ ಬಹುತೇಕ ಎಲ್ಲಾ ಕಡೆಗಳಿಂದ ಮೆಚ್ಚು ಪಡೆಯುತ್ತಿದೆ. ಅದರಲ್ಲಿಯೂ, ರಾಜಕೀಯ ವಲಯದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.