ಹೌದು, ಹಲವು ಮೂಲಗಳ ಪ್ರಕಾರ, ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಿದ್ದಾರೆ. ಆದರೆ, ಕಾರು ಖರೀದಿಸಿದ ಆ ವ್ಯಕ್ತಿ ಯಾರು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ ನಟಿ ಪ್ರಿಯಾಂಕಾ. ಇದೆಲ್ಲದರ ನಡುವೆ, ಪ್ರಿಯಾಂಕಾ ಅವರು ಆ ಕಾರನ್ನು ಮಾರಿದ್ದು ಯಾಕೆ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಂದಹಾಗೆ, ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ನಟಿ ಪ್ರಿಯಾಂಕಾ ಅವರು ತುಂಬಾ ಹೆಚ್ಚಾಗಿ ಬಳಸುತ್ತಿಲ್ಲ ಎನ್ನಲಾಗಿದೆ. ನಟಿ ಪ್ರಿಯಾಂಕಾ ಚೋಪ್ರಾ ಅವರು ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದ್ದು ಭಾರತದಲ್ಲಿ.