More

    ಜೇಮ್ಸ್ ಜಾತ್ರೆ: ಅಭಿಮಾನಿಗಳ ನಿದ್ದೆ ಕದ್ದ ಅಪ್ಪು, ಹೇಗಿತ್ತು ಮೊದಲ ದಿನದ ಭೋರ್ಗರೆತ?

    ಬೆಂಗಳೂರು : ಮಾರ್ಚ್ 17 2022… ಈ ದಿನಕ್ಕೆಂದು ಇಡೀ ಕರುನಾಡೇ ಕಾದು ಕುಳಿತ್ತಿತು. ಇದಕ್ಕೆ ಕಾರಣ, ಇಂದು ಅಪ್ಪು ಅವರ ಹುಟ್ಟು ಹಬ್ಬದ ಜತೆಗೆ ಅವರು ಹೀರೋ ಆಗಿ ಕೊನೆಯ ಬಾರಿ ಕಾಣಿಸಿಕೊಂಡ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ. ಹಾಗಾದರೆ, ಮೊದಲ ದಿನ ಅಪ್ಪು ಸಿನಿಮಾಗೆ ಸಿಕ್ಕಾ ಪ್ರತಿಕ್ರಿಯೆ ಹೇಗಿತ್ತು…? ಜೇಮ್ಸ್ ಸಿನಿಮಾ ನೋಡಿದ ಎಲ್ಲಾ ಅಪ್ಪು ಅಭಿಮಾನಿಗಳು ಬಹುತೇಕ ಭಾವನಾತ್ಮಕವಾಗಿ ಈ ಚಿತ್ರಕ್ಕೆ ಕನೆಕ್ಟ್​ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿರುವಾಗಲೇ ಅಪ್ಪು ಅವರು ನಿಧನ ಹೊಂದಿದ್ದು ನಿಜಕ್ಕೂ ನೋವಿನ ಸಂಗತಿ. ಪುನೀತ್​ ಇಲ್ಲ ಎಂಬ ಸತ್ಯವನ್ನು ಎದೆಯಲ್ಲಿಟ್ಟುಕೊಂಡೇ ಜನರು ಈ ಚಿತ್ರ ನೋಡುತ್ತಿದ್ದಾರೆ.
    ಹೀಗಾಗಿ, ಫ್ಯಾನ್ಸ್​ಗೆ ಸಿನಿಮಾ ಭಾವನಾತ್ಮಕವಾಗಿ ಸಖತ್ ಕನೆಕ್ಟ್ ಆಗದ್ದಾರೆ ಎಂದರೇ ತಪ್ಪಾಗುವುದಿಲ್ಲ. ಇನ್ನು, ದೊಡ್ಮನೆಯ ಮೂವರು ಅಣ್ಣ ತಮ್ಮಂದಿರನ್ನು ಬೆಳ್ಳಿ ಪರದೆಯ ಮೇಲೆ ನೋಡುತ್ತಿರುವುದು ಅಭಿಮಾನಿಗಳಿಗೆ ಒಂದು ಕಡೆ ಖುಷಿ, ಮತ್ತೊಂದು ಕಡೆ ನೋವನ್ನು ನೀಡಿದೆ. ಮತ್ತೊಂದೆಡೆ, ಅಪ್ಪು ಹುಟ್ಟು ಹಬ್ಬದ ಅಂಗವಾಗಿ ಅಪ್ಪು ಯುತ್ ಬ್ರಿಗೆಡ್ವತಿಯಿಂದ ಹಲವು ಕಾರ್ಯಕ್ರಮಗಳನ್ನು ಬೇಂಗಳೂರಿನಲ್ಲಿ ಆಯೋಜಿಸಲಾಗುತ್ತು. ಎಲ್ಲಾ ಥಿಯೇಟರ್​ಗಳಲ್ಲಿ ನೇತ್ರದಾನ, ಅನ್ನದಾನ, ರಕ್ತದಾನ, ಸಸಿಗಳನ್ನು ನೆಡುವ ಮೂಲಕ ಅಪ್ಪು ಮೇಲೆ ಇರುವ ಪ್ರೀತಿಯನ್ನು ತೋರಿಸಿಕೊಂಡಿದ್ದಾರೆ. ಜೇಮ್ಸ್ ಜಾತ್ರೆಯ ಮೊದಲ ದಿನದ ಅಬ್ಬರ ಹೇಗಿತ್ತು ಎಂದು ತಿಳಿಯಲು ಈ ವಿಡಿಯೋ ತಪ್ಪದೇ ವೀಕ್ಷಿಸಿ

    ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್​ ಕಟ್ಟಿರೋ ಜೆಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts