ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್​ ಕಟ್ಟಿರೋ ಜೆಟ್​

jems
Published on

ಬೆಂಗಳೂರು: ಇಡೀ ರಾಜ್ಯವೇ 'ಜೇಮ್ಸ್​' ಜಪ ಮಾಡುತ್ತಿದೆ. ಅಪ್ಪು ಇಲ್ಲದ ಮೊದಲ ಬರ್ತ್​ ಡೇ ಒಂದೆಡೆಯಾದರೆ, ಅವರು ನಾಯಕರಾಗಿ ನಟಿಸಿರುವ ಕೊನೇ ಚಿತ್ರ ಜೇಮ್ಸ್​ ವಿಶ್ವಾದ್ಯಂತ ತೆರೆಕಂಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಎಲ್ಲ ಥಿಯೇಟರ್​ಗಳು ಹೌಸ್​ಫುಲ್​ ಬೋರ್ಡ್​ ಹಾಕಿವೆ. ವಾರದಿಂದಲೇ ಎಲ್ಲೆಡೆ ಜೇಮ್ಸ್​ ಜಾತ್ರೆ ಕಳೆಗಟ್ಟಿದೆ. ಈ ನುಡುವೆ ಆಗಸದಲ್ಲಿ ಜೇಮ್ಸ್ ಪೋಸ್ಟರ್​ ಕಟ್ಟಿರೋ ಜೆಟ್​ ರಾಜ್ಯ ರಾಜಧಾನಿ ಬೆಂಗಳರಿನ ತುಂಬೆಲ್ಲಾ ಆಕಾಶದಲ್ಲಿ ಹಾರಾಡುತ್ತಿದೆ.

144 ಸೆಕ್ಷನ್ ಜಾರಿಯಲ್ಲಿ ಇರೋದ್ರಿಂದ ಜೇಮ್ಸ್ ಸಿನಿಮಾದ ಹೆಲಿಕಾಪ್ಟರ್ ಸಂಭ್ರಮಾಚರಣೆಗೆ ಅವಕಾಶ ಕೊಟ್ಟಿರಲಿಲ್ಲ. ಹೆಲಿಕಾಪ್ಟರ್ ಹಾರಾಟಕ್ಕೆ ಬ್ರೇಕ್ ಹಾಕಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರಿಂದ ಫ್ಯಾನ್ಸ್ ಬೇಸರಗೊಂಡಿದ್ದರು. ಈಗ ಜೇಮ್ಸ್ ಪ್ರೊಡಕ್ಷನ್ ಹೌಸ್ ಕಡೆಯಿಂದ ಜೆಟ್ ಆಕಾಶದಲ್ಲಿ ಹಾರಾಡ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net