

ಚಾಮರಾಜನಗರ: ಚಂದನವನದ ಯುವರತ್ನ, ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮತ್ತು ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಅಪ್ಪು ಅಭಿನಯದ ಎಲ್ಲ ಚಿತ್ರಗಳ ಕಟೌಟ್, ಜೇಮ್ಸ್ ಸಿನಿಮಾ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ಮುಖ್ಯರಸ್ತೆ, ಥಿಯೇಟರ್ ಉದ್ದಗಲಕ್ಕೂ ಅಪ್ಪು ಬ್ಯಾನರ್ಗಳೇ ರಾರಾಜಿಸುತ್ತಿವೆ. ಡೊಳ್ಳು ಕುಣಿತದೊಂದಿಗೆ ಮೆರವಣಿ ನಡೆಸಲಾಗಿದೆ. ಮುಂದುವರಿದು ವೃತ್ತಿಯಲ್ಲಿ ಕ್ಷೌರಿಕನಾಗಿರುವ ಇಲ್ಲೊಬ್ಬ ಅಭಿಮಾನಿ ಅಪ್ಪು ಜನ್ಮದಿನ ಪ್ರಯುಕ್ತ ಉಚಿತವಾಗಿ ಜನರಿಗೆ ಹೇರ್ ಕಟಿಂಗ್, ಶೇವಿಂಗ್ ಸೇವೆ ನೀಡುತ್ತಿದ್ದಾರೆ.
ಅಪ್ಪು ಹುಟ್ಟುಹಬ್ಬದ ಅಂಗವಾಗಿ ಚಾಮರಾಜನಗರದ ರಾಮಸಮುದ್ರದ ನ್ಯೂ ಲುಕ್ ಮೆನ್ಸ್ ಪಾರ್ಲರ್ನ ಮಧು ಗ್ರಾಹಕರಿಗೆ ಉಚಿತ ಸೇವೆ ನೀಡಲಿದ್ದಾರೆ. ಇಂದು(ಗುರುವಾರ) ಬೆಳಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಅಂಗಡಿಗೆ ಬರುವವರ ಬಳಿ ಹಣ ಪಡೆಯದೆ ಹೇರ್ ಕಟಿಂಗ್, ಶೇವಿಂಗ್ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ.