ನಿಯತ್ತಿಲ್ಲ, ಬೇಜವಾಬ್ದಾರಿ, ಅಹಂಕಾರಿ ಎನಿಸಿಕೊಂಡ ರಶ್ಮಿಕಾ ಮಂದಣ್ಣ! ಕಾರಣ?

Published on
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಪ್ರತಿದಿನ ಯಾವುದೋ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ, ಕನ್ನಡ ಭಾಷೆಯ ಮೇಲೆ ಹಾಗೂ ಸ್ಯಾಂಡಲ್​ವುಡ್ ಅನ್ನು ಅವರು ಪ್ರೀತಿಸುವುದಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೆ ಇರುತ್ತಾರೆ. ಬಾಲಿವುಡ್, ಟಾಲಿವುಡ್ ಎಂದು ಹೈದರಾಬಾದ್ ಹಾಗೂ ಮುಂಬೈನಲ್ಲಿ ಸುತ್ತಾಟ ನಡೆಸುತ್ತಿರುವ ನಟಿ ರಶ್ಮಿಕಾ ಈಗ ಮತ್ತೆ ಹಿಗ್ಗಾ-ಮುಗ್ಗಾ ಟ್ರೋಲ್ ಆಗುತ್ತಿದ್ದು, ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಹಾಗಾದರೆ, ರಶ್ಮಿಕಾ ಮಂದಣ್ಣ ಮಾಡಿದ ತಪ್ಪೇನು...? ನಟಿ ರಶ್ಮಿಕಾ ಯಾಕೆ ಟ್ರೋಲ್ ಆಗುತ್ತಿದ್ದಾರೆ? ಅಂದಹಾಗೆ, ಮಾರ್ಚ್ 17 ರಂದು ನಟ ಪುನೀತ್ ರಾಜ್​ಕುಮಾರ್ ಅವರ ಬರ್ತ್​ಡೇ ಹಾಗೂ ಅವರು ಹೀರೋ ಆಗಿ ಕೊನೆಯದಾಗಿ ಅಭಿನಯಿಸಿರುವ ಚಿತ್ರ 'ಜೇಮ್ಸ್' ತೆರೆಗಪ್ಪಳಿಸಿತು.
ಹೀಗಾಗಿ, ಬಹುತೇಕ ನಿನ್ನೆ ಇಂದ ಎಲ್ಲಾ ಸೆಲೆಬ್ರಿಟಿಗಳು ಅಪ್ಪುಗೆ ಹುಟ್ಟು ಹಬ್ಬ ಹಾಗೂ ಜೇಮ್ಸ್ ಸಿನಿಮಾಗೆ ಶುಭ ಕೋರಿದರು. ಆದರೆ, ಅಪ್ಪು ಅವರ ಜತೆಗೆ ನಟಿಸಿರುವ ರಶ್ಮಿಕಾ ಮಂದಣ್ಣ ಮಾತ್ರ ಯಾವುದೇ ಶುಭಶಯಗಳನ್ನು ತಿಳಿಸಿಲ್ಲ ಅಥವಾ ನಟನ ಹುಟ್ಟು ಹಬ್ಬಕ್ಕೆ ವಿಶ್ ಮಾಡಿಲ್ಲ. ಮಾರ್ಚ್ 17 ಅನ್ನು ಅಪ್ಪು ಅಭಿಮಾನಿಗಳು, ಇಡೀ ಕರುನಾಡೇ ಹಬ್ಬದಂತೆ ಆಚರಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಪುನೀತ್​ ಅವರನ್ನು ನೆನಪಿಸಿಕೊಂಡಿದ್ದಾರೆ. ಆದರೆ, ರಶ್ಮಿಕಾ ಮಾತ್ರ ಸಾಮಾಜಿಕ ಜಾಲತಾಣದಲ್ಲೂ ಸಹ ಒಂದು ಪೋಸ್ಟ್ ಕೂಡಾ ಹಾಕಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ರಶ್ಮಿಕಾ ಹಾಗೂ ಪುನೀತ್​ ರಾಜ್​ಕುಮಾರ್​ ಅವರು ‘ಅಂಜನಿಪುತ್ರ’ ಎಂಬ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.
ಒಟ್ಟಿಗೆ ನಟಿಸಿದ್ದು ಕೂಡಾ ನಟ ಪುನೀತ್​ಗೆ ರಶ್ಮಿಕಾ ಬರ್ತ್​ಡೇ ವಿಶ್ ಮಾಡದೆ ಇರುವುದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. ಇನ್ನು, ಅಪ್ಪು ನಿಧನರಾದಾಗ ಸಹ ರಶ್ಮಿಕಾ ಅವರು ಅಪ್ಪು ಬಗ್ಗೆ ಒಂದು ಮಾತು ಮಾಧ್ಯಮಗಳಲ್ಲಿ ಹೇಳಿಲ್ಲ. ಕೇವಲ ನಟನ ಮೃತ ದೇಹವನ್ನು ನೋಡಿ ತೆರಳಿದರು. ಸದ್ಯ, ರಶ್ಮಿಕಾ ಅವರ ಈ ವರ್ತನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಟ್ರೋಲಿಗರು ಅಂತೂ ನಟಿ ರಶ್ಮಿಕಾ ಅವರಿಗೆ 'ನಿಯತ್ತಿಲ್ಲ' ಎಂದು ಪೋಸ್ಟ್​ಗಳು ಹಾಕಲು ಆರಂಭಿಸಿದ್ದಾರೆ. ಉಳಿದವರು ಇದು ಎಂತಹ ಬೇಜವಾಬ್ದಾರಿ, ಅಹಂಕಾರದ ವರ್ತನೆ ಎಂದು ಪ್ರಶ್ನಿಸ ತೊಡಗಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net