ದಕ್ಷಿಣ ಭಾರತದ ಮತ್ತೋರ್ವ ಖ್ಯಾತ ನಟನನ್ನು ಬಲಿ ಪಡೆದ ಕರೊನಾ! ರಜನಿಕಾಂತ್​ ಜತೆ ನಟಿಸಿದ್ದ ನಟ ಇನ್ನಿಲ್ಲ

actor
Published on

ಚೆನ್ನೈ: ಕರೊನಾ ಸೋಂಕು ದೇಶಾದ್ಯಂತ ತನ್ನ ಅಬ್ಬರವನ್ನು ಮುಂದುವರಿಸಿದೆ. ಚಿತ್ರೋದ್ಯಮದ ಹಲವರನ್ನು ಸೋಂಕು ಬಲಿ ತೆಗೆದುಕೊಂಡಿದೆ. ದಕ್ಷಿಣ ಭಾರತದ ನಟರೊಬ್ಬರು ಇಂದು ಸೋಂಕಿಗೆ ಬಲಿಯಾಗಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಟ ನಿತೀಶ್ ವೀರಾ(45) ಕರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿದ್ದು, ಚನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಅಸು ನೀಗಿದ್ದಾರೆ.

ನಿತೀಶ್​ ಅವರು ಸುಮಾರು 20 ವರ್ಷಗಳಿಂದ ಕಾಲಿವುಡ್​ನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಕಾಲಾ ಚಿತ್ರ. ಸೂಪರ್​ ಸ್ಟಾರ್ ರಜನಿಕಾಂತ್​ ಜತೆ ಈ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಅವರ ಸ್ಟಾರ್ ಬದಲಾಗಿತ್ತು. ವಲ್ಲರಸು, ಪುದುಪೇಟೈ, ಪೇರರಸು, ನೇಟ್ರ ಇಂಡ್ರು, ಲಾಭಂ, ಅಸುರನ್​, ಪಾಂಡಿಯನ್​, ನೀರೋ ಸೇರಿ ಅನೇಕ ಚಿತ್ರಗಳಲ್ಲಿ ನಿತೀಶ್​ ಬಣ್ಣ ಹಚ್ಚಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net