More

    ಸಾಯುತ್ತಿದ್ದ ಅಮ್ಮನಿಗಾಗಿ ವಿಡಿಯೋ ಕಾಲ್​ನಲ್ಲೇ ಹಾಡು ಹೇಳಿದ ಮಗ! ಕಣ್ಣೀರು ತರಿಸುವ ಕಥೆ ಹಂಚಿಕೊಂಡ ಡಾಕ್ಟರ್

    ಬೆಂಗಳೂರು: ಈ ಕರೊನಾದಿಂದಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಎಷ್ಟೊ ಜನರು ಆಸ್ಪತ್ರೆಗೆ ಹೋದವರು ಶವವಾಗಿ ವಾಪಸು ಬರುತ್ತಿದ್ದಾರೆ. ರೋಗಿಗಳು ಕೊನೆಯುಸಿರೆಳೆವ ಮುನ್ನ ಅವರಿಗೆ ಅವರ ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್​ ಮುಖಾಂತರ ಮಾತನಾಡುವ ಅವಕಾಶವನ್ನೂ ವೈದ್ಯಕೀಯ ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ. ಅದೇ ರೀತಿ ತಾಯಿಯ ಕೊನೆ ಕ್ಷಣದಲ್ಲಿ ವಿಡಿಯೋ ಕಾಲ್​ ಮಾಡಿದ ಮಗನೊಬ್ಬ ತಾಯಿಗಾಗಿ ಹಾಡೊಂದನ್ನು ಹಾಡಿರುವ ಘಟನೆ ನಡೆದಿದೆ.

    ಡಿಪ್ಶಿಖಾ ಘೋಷ್ ಹೆಸರಿನ ಡಾಕ್ಟರ್​ ತಮ್ಮ ಆಸ್ಪತ್ರೆಯಲ್ಲಿ ನಡೆದ ಕಣ್ಣೀರು ತರಿಸುವ ಕಥೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಘಮಿತ್ರ ಚಟರ್ಜಿ ಹೆಸರಿನ ಮಹಿಳೆ ಕರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯನ್ನು ಬದುಕಿಸುವುದು ತುಂಬಾ ಕಷ್ಟವಾಗಿತ್ತಂತೆ. ಇನ್ನೇನು ಆಕೆ ಕೊನೆಯುಸಿರೆಳೆಯುತ್ತಾಳೆ ಎನ್ನುವ ವೇಳೆಗೆ ಡಿಪ್ಶಿಖಾ ಘೋಷ್, ಸೋಂಕಿತೆಯ ಮಗ ಸೋಹಮ್​ ಚಟರ್ಜಿಗೆ ವಿಡಿಯೋ ಕಾಲ್​ ಮಾಡಿದ್ದಾರೆ. ಅಮ್ಮ ಮಗನನ್ನು ವಿಡಿಯೋ ಕಾಲ್​ನಲ್ಲಿ ಮಾತನಾಡಿಕೊಳ್ಳಲು ಬಿಟ್ಟಿದ್ದಾರೆ.

    ಈ ವೇಳೆ ಡಾಕ್ಟರ್​ಗೆ ಮನವಿ ಮಾಡಿದ ಸೋಹಮ್​, ಅಮ್ಮನಿಗಾಗಿ ಹಾಡೊಂದನ್ನು ಹಾಡಲಾರಂಭಿಸಿದ್ದಾರೆ. ಅಮ್ಮ ಮಗನ ಕಥೆಯಿರುವ ಸಿನಿಮಾದ “ತೇರಾ ಮುಜ್ಸೆ ಹೈ ಪೆಹ್ಲೇ ಕ ನತಾ ಕೋಯಿ” ಹಾಡನ್ನು ಹಾಡಿದ್ದಾರೆ. ಮೊಬೈಲ್​ ಹಿಡಿದು ಕುಳಿತಿದ್ದ ಡಾಕ್ಟರ್​ ಹಾಡಿಗೆ ತಲೆದೂಗಿದ್ದಾರೆ. ಈ ಹಾಡನ್ನು ಕೇಳಿ ಅಕ್ಕ ಪಕ್ಕದ ವಾರ್ಡ್​ಗಳಲ್ಲಿದ್ದ ನರ್ಸ್​ಗಳೂ ಬಂದು ನಿಂತಿದ್ದಾರೆ. ಅಮ್ಮ ಮಗನ ಪ್ರೀತಿಯನ್ನು ಕಂಡು ಪ್ರತಿಯೊಬ್ಬರು ಕಣ್ಣೀರು ಸುರಿಸಿದ್ದಾರೆ.

    ಈ ಘಟನೆಯನ್ನು ಡಾಕ್ಟರ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್​ ಭಾರೀ ವೈರಲ್​ ಆಗಿದೆ. ಕರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡಿರುವ ಅದೆಷ್ಟೋ ಜನ ಅವರವರ ಅಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ. (ಏಜೆನ್ಸೀಸ್)

    ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

    ಕರೊನಾ ಎಫೆಕ್ಟ್​: ಅವನ ಮದುವೆಗೆ ಅವನೇ ಓಲಗದವ! ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts