More

    ರಾಖಿ ಸಾವಂತ್ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು

    ಮುಂಬೈ: ಬಾಲಿವುಡ್​ ನಟಿ ರಾಖಿ ರಾಖಿ ಸಾವಂತ್ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿದೆ, ತರಾತುರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯ ಸಮಸ್ಯೆಯಿಂದ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಟಿ ಆಸ್ಪತ್ರೆಯ ಬೆಡ್ ಮೇಲಿರುವ ಕೆಲವು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ರಾಖಿ ಸಾವಂತ್ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು

    ಬಾಲಿವುಡ್‌ನ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ತನ್ನ ಸ್ಟೈಲ್ ಮತ್ತು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾಖಿ ಸಾವಂತ್ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು

    ರಾಖಿ ಸಾವಂತ್ ಬೆಡ್​​ ಮೇಲೆ ಮಲಗಿರುವ ಫೋಟೋ ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲ ಅಥವಾ ಗಾಢ ನಿದ್ರೆಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನರ್ಸ್ ಅವರ ಬಿಪಿ ಪರೀಕ್ಷಿಸುತ್ತಿರುವುದು ಕಂಡುಬರುತ್ತದೆ. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿದೆ. ಸದ್ಯ ವೈದ್ಯರು ಅವರಿಗೆ ಗಂಭೀರ ಹೃದಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಈಗ ನಟಿಗೆ ಏನಾಗಿದೆ ಎಂಬ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

    ದುಬೈನಲ್ಲಿ ಬಹಳ ಕಾಲ ಉಳಿದುಕೊಂಡಿದ್ದ ರಾಖಿ ಮುಂಬೈಗೆ ಮರಳಿದ್ದಾರೆ. ಕೆಲಸದ ಕಾರಣದಿಂದ ದುಬೈನಲ್ಲಿ ಬಹಳ ದಿನ ಇರುತ್ತೇನೆ ಎನ್ನುತ್ತಾರೆ. ರಾಖಿ ಸಾವಂತ್ ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಂಚಲನ ಮೂಡಿಸಲು ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಆದಿಲ್ ದುರಾನಿ ಜೊತೆಗಿನ ವಿಚ್ಛೇದನ ವಿಚಾರ ಸುದ್ದಿಯಾಗಿತ್ತು. ಆ ವಿಷಯ ಇನ್ನೂ ಇತ್ಯರ್ಥವಾಗಿರಲಿಲ್ಲ, ಈಗ ನಟಿ ತನ್ನ ಮಾಜಿ ಪತಿ ರಿತೇಶ್ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ನಟಿ ಕೊನೆಯದಾಗಿ ‘ಬಿಗ್ ಬಾಸ್ ಮರಾಠಿ’ಯಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು ಅನೇಕ ಸಂಗೀತ ವೀಡಿಯೊಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

    ರಾಖಿ ಸಾವಂತ್ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts