ಹುಬ್ಬಳ್ಳಿ: ಹರಿವಂಶ ಕಥಾ ಪ್ರವಚನ ಸಪ್ತಾಹ ಕಾರ್ಯಕ್ರಮ ಮೇ -30ರಿಂದ ಜೂನ್ 5ರ ವರೆಗೆ ಇಲ್ಲಿಯ ವಿಜಯನಗರದ ಮಾರುತಿ ದೇವಾಲಯದಲ್ಲಿ (ಕೆಂಪಣ್ಣವರ ಕಲ್ಯಾಣ ಮಂಟಪ) ನಡೆಯಲಿದೆ.
ನಿತ್ಯ ಸಂಜೆ 6.30ಕ್ಕೆ ವೇದಪೀಠದ ಗುರುಗಳಾದ ಡಾ. ಕಂಠಪಲ್ಲೀ ಆಚಾರ್ಯರು ಪ್ರವಚನ ನೀಡುವರು.
ವಿಜಯಾಂಜನೇಯ ವೇದ ಸಂಸತ ವಿದ್ಯಾಲಯ, ಕಂಠಪಲ್ಲೀ ವೇದಪೀಠ ಟ್ರಸ್ಟ್, ಶ್ರೀಸಿಂಹಗೀತಾ ಪ್ರತಿಷ್ಠಾನಂ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿವಾಹ, ಸಂತಾನಪ್ರಾಪ್ತಿ, ಐಶ್ವರ್ಯ ಸಿದ್ಧಿಯನ್ನು ಶೀಘ್ರವಾಗಿ ಕೊಡುವ ಹರಿವಂಶ ಕಥಾ ಶ್ರವಣ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಬೇಕೆಂದು ಪ್ರಕಟಣೆ ಕೋರಿದೆ.