ಅಮೇರಿಕಾದಲ್ಲೂ ಜಸ್ಟೀಸ್​ ಫಾರ್​ ಸುಶಾಂತ್​ ಅಭಿಯಾನ ...

Sushant Singh Final
Published on

ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಅಭಿಮಾನಿಗಳು ಬೀದಿಗಿಳಿದಿದ್ದು ಗೊತ್ತೇ ಇದೆ. ಕಳೆದ ತಿಂಗಳು, ಕೆಲವರು ದೆಹಲಿಯ ಬೀದಿಬೀದಿಗಳಲ್ಲಿ ಹೋರ್ಡಿಂಗ್​ಗಳನ್ನು ಹಾಕಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದರು.

ಇದೀಗ ಅಮೇರಿಕಾದಲ್ಲೂ ಸುಶಾಂತ್​ ಅವರ ಅಭಿಮಾನಿಗಳು, ಜಸ್ಟೀಸ್​ ಫಾರ್​ ಸುಶಾಂತ್​ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಕ್ಯಾಲಿಫೋರ್ನಿಯಾದ ಕೆಲವು ಕಡೆ ಜಸ್ಟೀಸ್​ ಫಾರ್​ ಸುಶಾಂತ್​ ಎಂಬ ಬಿಲ್​ಬೋರ್ಡ್​ಗಳು ರಾರಾಜಿಸುತ್ತಿವೆ.

ಈ ಕುರಿತು ಸ್ವತಃ ಸುಶಾಂತ್​ ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಹಾಕಿಕೊಂಡಿದ್ದಾರೆ. ಭಾರತದಲ್ಲಿ ಶುರುವಾದ ಈ ಅಭಿಯಾನ, ಹೇಗೆ ಇಡೀ ಜಗತ್ತನ್ನು ವ್ಯಾಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ತಮ್ಮಇನ್​ಸ್ಟಾಗ್ರಾಂನಲ್ಲಿ ಜಸ್ಟೀಸ್​ ಫಾರ್​ ಸುಶಾಂತ್​ನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿರುವ ಶ್ವೇತಾ, 'ಗ್ರೇಟ್​ ಮಾಲ್​ ಪಾರ್ಕವೇಯ ಎಕ್ಸಿಟ್​ನಲ್ಲಿ, ಭಾಯ್​ ಕುರಿತು ಒಂದು ದೊಡ್ಡ ಬಿಲ್​ಬೋರ್ಡ್​ ಹಾಕಲಾಗಿದೆ. ಈ ಅಭಿಯಾನ ಇದೀಗ ಎಲ್ಲೆಡೆ ವ್ಯಾಪಿಸುತ್ತಿದೆ' ಎಂದು ಬರೆದಿದ್ದಾರೆ.

ಇನ್ನು ಸುಶಾಂತ್ ಸಿಂಗ್​ ಪ್ರಕರಣದ ತನಿಖೆ ನಡೆಯುತ್ತಿದ್ದು, ಇತ್ತೀಚೆಗೆ ಎನ್​ಫೋರ್ಸ್​ಮೆಂಟ್​ ಡೈರೆಕ್ಟರೇಟ್​ ವಿಭಾಗವು, ಸುಶಾಂತ್​ ಅವರ ಗೆಳತಿ ರಿಯಾ ಅವರನ್ನು ಕರೆಸಿ, ಎಂಟು ತಾಸುಗಳ ಕಾಲ ವಿಚಾರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net