ಅಭಿಷೇಕ್​ ಬಚ್ಚನ್​ ಕೋವಿಡ್​ ವರದಿ ನೆಗೆಟಿವ್​; ಶೀಘ್ರದಲ್ಲಿ ಮನೆ ಸೇರಲಿದ್ದಾರೆ ಜೂ. ಬಚ್ಚನ್

abhishek-bachchan-759-2
Published on

ಕರೊನಾ ಸೋಂಕಿಗೆ ತುತ್ತಾಗಿ ಕಳೆದ 25ಕ್ಕೂ ಹೆಚ್ಚು ದಿನಗಳನ್ನು ನಾನಾವತಿ ಆಸ್ಪತ್ರೆಯಲ್ಲಿ ಕಾಲ ಕಳೆದ ಅಭಿಷೇಕ್​ ಬಚ್ಚನ್​ ಇದೀಗ ಮನೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಅವರ ಕರೊನಾ ವರದಿ ನೆಗೆಟಿವ್ ಬಂದಿದ್ದು, ಶೀಘ್ರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಅಮಿತಾಬ್​ ಬಚ್ಚನ್​ ಕರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದರು. ಮನೆಯಲ್ಲಿಯೂ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದರು. ಅಷ್ಟೇ ಅಲ್ಲ ಆದಷ್ಟು ಬೇಗ ಅಭಿಷೇಕ್​ ಗುಣಮುಖನಾಗಿ ಆಚೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಅದರಂತೆ ಇದೀಗ ಅಭಿಷೇಕ್​ ಕೋವಿಡ್ ವರದಿ ನೆಗೆಟಿವ್​ ಬಂದಿದ್ದು ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

‘ಗೆಳೆಯರೇ ಈ ಮೊದಲು ನಾನು ನಿಮಗೆ ಹೇಳಿಲ್ಲವೇ, ಕರೊನಾವನ್ನು ನಾನು ಸೋಲಿಸಿಯೇ ಆಚೆ ಬರುತ್ತೇನೆಂದು. ಅದರಂತೆ ಇದೀಗ ನನ್ನ ಪರೀಕ್ಷಾ ವರದಿ ನೆಗೆಟಿವ್​ ಬಂದಿದೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ನನ್ನ ಕುಟುಂಬಕ್ಕೆ ಮತ್ತು ಆತ್ಮಿಯರಿಗೆ ಮುಖ್ಯವಾಗಿ ಆಸ್ಪತ್ರೆ ವೈದ್ಯರಿಗೆ ನನ್ನ ಧನ್ಯವಾದ’ ಎಂದಿದ್ದಾರೆ. ಆದರೆ, ಯಾವಾಗ ಆಸ್ಪತ್ರೆಯಿಂದ ಬಿಡುಗಡೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಅಂದಹಾಗೆ, ಈ ಮೊದಲು ಅಮಿತಾಬ್​ಗೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅಭಿಷೇಕ್​ ಮತ್ತು ಐಶ್ವರ್ಯಾ ರೈ, ಪುತ್ರಿ ಆರಾಧ್ಯಳಿಗೂ ಸೋಂಕು ದೃಢಪಟ್ಟಿತ್ತು. ಇದೀಗ ಇಡೀ ಕುಟುಂಬ ಕರೊನಾ ಮುಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net