PHOTOS: ಸ್ಯಾಂಡಲ್​ವುಡ್​ಗೆ ಹ್ಯಾಟ್ರಿಕ್​ ಹೀರೋ ಸಾರಥ್ಯ; ಶಿವಣ್ಣನಿಗೆ ಶುಭ ಕೋರಿದ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​

WhatsApp Image 2020-08-08 at 6.45.01 PM
Published on

ಇತ್ತೀಚೆಗಷ್ಟೇ ಇಡೀ ಸ್ಯಾಂಡಲ್​ವುಡ್​ ಕಲಾವಿದರೆಲ್ಲ ಶಿವಣ್ಣನ ಮನೆಯಲ್ಲಿ ಸೇರಿ, ಸಿನಿಮಾರಂಗದ ಮುಂದಿನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ್ದರು. ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಸ್ಯಾಂಡಲ್​ವುಡ್​ನ ಸಾರಥ್ಯ ವಹಿಸಿಕೊಳ್ಳುವುದೆಂದೂ ಇದೇ ವೇಳೆ ಎಲ್ಲರ ನಿರ್ಧಾರವಾಗಿತ್ತು. ಅದಕ್ಕೆ ಶಿವಣ್ಣನ ಕಡೆಯಿಂದಲೂ ಸಮ್ಮತಿ ಸಿಕ್ಕಿತ್ತು. ಇದೀಗ ಆ ಪ್ರಯುಕ್ತ ಶುಭಕೋರಲು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಸಹ ಶಿವಣ್ಣ ಅವರ ಮನೆಗೆ ಆಗಮಿಸಿ ಶುಭಕೋರಿದ್ದಾರೆ. ನಾಗವಾರದ ಮನೆಗೆ ಆಗಮಿಸಿದ ವೆಂಕಟೇಶ್​, ಸುಮಾರು ಗಂಟೆಗಳ ಹೊತ್ತು ಶಿವಣ್ಜ ಜತೆ ಉಭಯಕುಶಲೋಪರಿ ವಿಚಾರಿಸಿ, ಸಿನಿಮಾ, ಕರೊನಾ, ನೆರೆಹಾವಳಿ ಹೀಗೆ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಚಿತ್ರ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್​, ನಿರ್ದೇಶಕ ಆರ್. ಚಂದ್ರು ಸೇರಿ ಹಲವರು ಇದ್ದರು. ಆ ಮಾತುಕತೆಯ ಫೋಟೋಗಳು ಇಲ್ಲಿವೆ.

Ee1fz2IVAAAEMCa
Ee1fyZpUcAEClX8
Ee1fz2IVAAAEMCa
1122
Ee1fy6SUcAEjMQt

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net