ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಕೊಲೆ … ಪೋಸ್ಟ್​ ಮಾರ್ಟಂ ಮಾಡಿದವರಿಂದ ಬಯಲು

Sushant Singh Rajput 1
Published on

ಮುಂಬೈ: ಬಾಲಿವುಡ್ ನಟ ಸುಶಾಂತ್​ ಸಿಂಗ್​ ರಜಪೂತ್​ ಎರಡೂವರೆ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಿಗೂಢ ಸಾವಿಗೆ ನಿಖರವಾದ ಕಾರಣಗಳು ಸಿಕ್ಕಿರಲಿಲ್ಲ. ತನಿಖೆ ಮಾಡಿದವರು ಇದು ಕೊಲೆ ಎಂದರೆ, ಸುಶಾಂತ್​ ಕುಟುಂಬದವರು ಈ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇನ್ನೇನು ಪ್ರಕರಣ ಮುಚ್ಚಿ ಹೋಯಿತು ಎನ್ನುವಷ್ಟರಲ್ಲೇ ಒಂದು ಸ್ಫೋಟಕ ರಹಸ್ಯ ಬಯಲಾಗಿದೆ.

ಅಂದು ಕೂಪರ್​ ಆಸ್ಪತ್ರೆಯಲ್ಲಿ ಸುಶಾಂತ್​ ಅವರ ಪೋಸ್ಟ್ ಮಾರ್ಟಂ ಮಾಡಿದ ತಂಡದಲ್ಲಿದ್ದ ವೈದ್ಯರೊಬ್ಬರು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಅವರ ಪೋಸ್ಟ್​ ಮಾರ್ಟಂ ತಂಡದಲ್ಲಿ ರೂಪ್​ಕುಮಾರ್​ ಶಾ ಎನ್ನುವವರು ಸಹ ಇದ್ದರು. ಅವರೀಗ ಸುಶಾಂತ್​ ಸಾವಿನ ರಹಸ್ಯವನ್ನು ಬಯಲು ಮಾಡಿದ್ದಾರೆ. 'ಅಂದು ಐದು ಶವಗಳು ಬಂದಿದ್ದವು. ಅದರಲ್ಲಿ ಒಂದು ವಿಐಪಿ ಶವವಾಗಿತ್ತು. ನಾವು ಆಟೋಪ್ಸಿ ಮಾಡುವುದಕ್ಕೆ ಹೋದಾಗ, ಅದು ಸುಶಾಂತ್​ ಸಿಂಗ್​ ಎಂದು ಗೊತ್ತಾಯಿತು. ಅವರ ದೇಹತ ಮೇಲೆ, ಅದರಲ್ಲೂ ಕುತ್ತಿಗೆಯ ಬಳಿ ಎರಡ್ಮೂರು ಗುರುತುಗಳು ಇದ್ದವು. ಇಂಥ ಪ್ರಕರಣಗಳಲ್ಲಿ ನಾವು ಪೋಸ್ಟ್​ ಮಾರ್ಟಂ ರೆಕಾರ್ಡ್​ ಮಾಡಿಕೊಳ್ಳಬೇಕು. ಆದರೆ, ನಮ್ಮ ಉನ್ನತ ಅಧಿಕಾರಿಗಳು, ಕೆಲವು ಫೋಟೋಗಳು ಮಾತ್ರ ಸಾಕು ಎಂದರು. ನಾವು ಅದರ ಪ್ರಕಾರ ಕೆಲವು ಫೋಟೋಗಳನ್ನು ಮಾತ್ರ ಕ್ಲಿಕ್ಕಿಸಿದೆವು' ಎಂದಿದ್ದಾರೆ ರೂಪ್​ಕುಮಾರ್​ ಶಾ.

ಸುಶಾಂತ್​ ಸಿಂಗ್​ ಅವರ ದೇಹವನ್ನು ನೋಡುತ್ತಿದ್ದಂತೆಯೇ, ಇದು ಆತ್ಮಹತ್ಯಯಲ್ಲ ಕೊಲೆ ಎಂದು ರೂಪ್​ಕುಮಾರ್​ ಹೇಳಿದ್ದರಂತೆ. 'ನಾನು ಬಾಡಿ ನೋಡುತ್ತಿದ್ದಂತೆಯೇ ನನ್ನ ಸೀನಿಯರ್​ಗಳಿಗೆ ಇದು ಕೊಲೆ ಎಂದು ಹೇಳಿದೆ. ಅಷ್ಟೇ ಅಲ್ಲ, ನಿಯಮಾನುಸಾರ ಕೆಲಸ ಮಾಡಬೇಕು ಎಂದೆ. ಆದರೆ, ನಮ್ಮ ಮೇಲಧಿಕಾರಿಗಳು ಮಾತ್ರ ಬೇಗ ಒಂದಿಷ್ಟು ಫೋಟೋ ತೆಗೆದುಕೊಂಡು ಪೊಲೀಸರಿಗೆ ಹೆಣ ಕೊಡಿ ಎಂದು ಹೇಳಿದರು. ಅದರಂತೆ ನಾವು ಅವತ್ತೇ ರಾತ್ರಿ ಪೋಸ್ಟ್​ ಮಾರ್ಟಂ ಮಾಡಿಬಿಟ್ಟೆವು' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net