ಔರಂಗಜೇಬನ ಪಾತ್ರದಲ್ಲಿ ಬಾಬ್ಬಿ; ‘ಹರಿಹರ ವೀರ ಮಲ್ಲು’ ಚಿತ್ರದಲ್ಲಿ ಬಾಲಿವುಡ್ ನಟ

Bobby
Published on

ಬಾಲಿವುಡ್ ನಟ ಬಾಬ್ಬಿ ಡಿಯೋಲ್ ಸದ್ಯ ದಕ್ಷಿಣದತ್ತ ಮುಖ ಮಾಡಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಓಟಿಟಿ ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲೇ ಹೆಚ್ಚು ಬಿಜಿಯಾಗಿದ್ದ ಅವರು, ಈಗ ಪವನ್ ಕಲ್ಯಾಣ್ ನಾಯಕನಾಗಿರುವ ‘ಹರಿಹರ ವೀರ ಮಲ್ಲು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಕೃಷ್ಣ ಜಗರ್ಲಮುಡಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬಾಬ್ಬಿ ಡಿಯೋಲ್, ಮೊಘಲ್ ದೊರೆ ಔರಂಗಜೇಬನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಹೈದರಾಬಾದ್​ನಲ್ಲಿ ಅದ್ಧೂರಿಯಾಗಿ ದರ್ಬಾರ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. 17ನೇ ಶತಮಾನದಲ್ಲಿ ಮೊಘಲರ ಆಳ್ವಿಕೆಯಲ್ಲಿ ವೀರಮಲ್ಲು ಎಂಬ ಡಕಾಯಿತ ಕೋಹಿನೂರ್ ವಜ್ರವನ್ನು ಕಳ್ಳತನ ಮಾಡುವ ಸುತ್ತ ಕಥೆ ಹೆಣೆಯಲಾಗಿದೆ. ಪವನ್ ಕಲ್ಯಾಣ್, ಬಾಬ್ಬಿ ಡಿಯೋಲ್ ಜತೆ ನಿಧಿ ಅಗರ್ವಾಲ್, ಅರ್ಜುನ್ ರಾಮಪಾಲ್, ನರ್ಗಿಸ್ ಫಕ್ರಿ, ವಿಕ್ರಮ್ೕತ್ ವಿರ್ಕ್, ಆದಿತ್ಯ ಮೆನನ್ ಪ್ರಮುಖ ತಾರಾಗಣದಲ್ಲಿದ್ದಾರೆ.

ಇದು ಪವನ್ ಕಲ್ಯಾಣ್ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ 2023ರ ಮಾರ್ಚ್​ನಲ್ಲಿ ರಿಲೀಸ್ ಆಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net