

ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ರ ಸದ್ಯದ ಸಾಹಸಗಳ ಬಗ್ಗೆ ಬಹುತೇಕರಿಗೆ ಗೊತ್ತಿರುವಂಥದ್ದೇ. ಆದರೆ ಅವರ ಸಾಹಸಗಳ ಹಿಂದಿರುವ ರಹಸ್ಯ ಏನು ಎಂಬ ಕುತೂಹಲ ಹೊಂದಿದ್ದವರಿಗೆ ಹಾಗೂ ಅಷ್ಟಕ್ಕೂ ಅವನ್ನೆಲ್ಲ ಅವರೇ ಮಾಡುತ್ತಿದ್ದರೇ ಎಂದು ಬೆರಗಿನಿಂದ ನೋಡುತ್ತಿದ್ದವರಿಗೆ ಈಗ ಅವರೇ ಉತ್ತರ ನೀಡಿದ್ದಾರೆ. ತಮ್ಮ ಸಾಹಸಗಳ ಹಿಂದಿರುವ ಪುರುಷ ಯಾರು ಎಂಬುದನ್ನು ಅವರೇ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ತಮ್ಮ ಸಾಹಸದ ದೃಶ್ಯಗಳೊಂದಿಗೆ ಆ ವ್ಯಕ್ತಿಯ ಚಿತ್ರವನ್ನೂ ಹಂಚಿಕೊಂಡಿರುವ ಸನ್ನಿ, ಆ ಮೂಲಕ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಸನ್ನಿ ಲಿಯೋನ್ ಒಂದು ಸಾಹಸಮಯ ವೆಬ್ ಸೀರೀಸ್ನಲ್ಲಿ ಅಭಿನಯಿಸುತ್ತಿರುವುದು ಈಗಾಗಲೇ ಬಹಿರಂಗಗೊಂಡಿದ್ದು, ಶೂಟಿಂಗ್ ಕೂಡ ಆರಂಭವಾಗಿದೆ. ವಿಕ್ರಮ್ ಭಟ್ ನಿರ್ದೇಶನದ 'ಅನಾಮಿಕ' ಎಂಬ ವೆಬ್ ಸೀರೀಸ್ನಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದಲ್ಲದೆ ಭಾರಿ ಸಾಹಸಗಳನ್ನೂ ಮಾಡುತ್ತಿದ್ದಾರೆ. ಹತ್ತು ಎಪಿಸೋಡ್ಗಳ ಈ ವೆಬ್ ಸೀರೀಸ್ನ ಶೂಟಿಂಗ್ ಈಗಾಗಲೇ ಮುಂಬೈನಲ್ಲಿ ಆರಂಭವಾಗಿದೆ. ಅದರಲ್ಲಿನ ಒಂದು ಸಾಹಸ ದೃಶ್ಯದ ತುಣುಕನ್ನು ಹಂಚಿಕೊಂಡಿರುವ ಸನ್ನಿ, ತಮ್ಮ ಸಾಹಸದ ಹಿಂದಿನ ಆ ಟ್ಯಾಲೆಂಟೆಡ್ ಯಂಗ್ಮ್ಯಾನ್ನ ಪರಿಚಯ ಕೂಡ ಮಾಡಿಕೊಟ್ಟಿದ್ದಾರೆ.
ತರಬೇತಿ ಇಲ್ಲದೆ ಮಾಡಿದರೆ ಅಪಾಯಕಾರಿ ಎನಿಸುವಂಥ ಸಾಹಸಗಳನ್ನೂ ಈ ಪ್ರತಿಭಾವಂತ ಯುವಕ ಸುಲಭದಲ್ಲಿ ಮಾಡುವ ಮೂಲಕ ನಾನು ಅದ್ಭುತವಾಗಿ ಕಾಣಿಸುವಂತೆ ಮಾಡಿದ್ದಾನೆ. ಅದಕ್ಕಾಗಿ ತಮ್ಮ ಡೂಪ್ ನಟ ಯಾಸರ್ ಮುನಿರ್ಗೆ ಥ್ಯಾಂಕ್ಸ್ ಹೇಳಿರುವ ಸನ್ನಿ, ಆತ ತಮಗೆ ಕಳಿಸಿದ್ದ ಖುಷಿಯ ಸಂದೇಶಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಟ್ಗೆ ಬಂದು ವಿಗ್ ಧರಿಸಿ ಹುಡುಗಿ ಥರ ವಿಶ್ವಾಸದಿಂದ ಅಭಿನಯಿಸುವುದಕ್ಕೂ ಬಹಳಷ್ಟು ಶ್ರಮ ಬೇಕಾಗುತ್ತದೆ. ಕಂಫರ್ಟ್ ಜೋನ್ಗೂ ಮೀರಿ ತಮ್ಮ ಪರವಾಗಿ ಅಭಿನಯಿಸುತ್ತಿರುವುದಕ್ಕೆ ಯಾಸರ್ ಕುರಿತು ಸನ್ನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಸನ್ನಿಯ ಆ ಪೋಸ್ಟ್ ಲಿಂಕ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..