ಶಾರುಖ್​ ಪುತ್ರಿಯ ವರ್ಕೌಟ್​ ವಿಡಿಯೋ ವೈರಲ್​! ಸುಹಾನಾ ಫಿಟ್​ನೆಸ್​ಗೆ ಫ್ಯಾನ್ಸ್​ ಫಿದಾ | Suhana Khan

Suhana Khan
Published on

ಮುಂಬೈ: ಬಾಲಿವುಡ್​ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಹಾಗೂ ನಟಿ ಸುಹಾನಾ ಖಾನ್ ( Suhana Khan ) ಅವರ ವರ್ಕೌಟ್ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಸೋಮವಾರ (ಅ.15) ಸುಹಾನಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಮತ್ತೊಂದು ವರ್ಕೌಟ್​ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಸುಹಾನಾ ಅವರು ಜಿಮ್​ನಲ್ಲಿ ತೀವ್ರವಾದ ಕಸರತ್ತು ನಡೆಸುವ ಮೂಲಕ ಬೆವರು ಹರಿಸುತ್ತಿದ್ದಾರೆ. ಪುಲ್ ಅಪ್, ಪುಶ್ ಅಪ್ ಮತ್ತು ಡೆಡ್ ಲಿಫ್ಟ್​ನಂತಹ ಕಷ್ಟದ ವ್ಯಾಯಾಮಗಳನ್ನು ಸುಹಾನಾ ಮಾಡುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸ್ಟಾರ್​ ಪುತ್ರಿ ತನ್ನ ವರ್ಕೌಟ್ ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 5 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ, 2 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಇನ್ನು ಕಾಮೆಂಟ್ಸ್​ ಬಾಕ್ಸ್​ನಲ್ಲಿ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಸುಹಾನಾಳ ವರ್ಕೌಟ್​ ಬಗ್ಗೆ ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಸುಹಾನಾ ಫಿಟ್​ನೆಸ್​ ನೋಡಿ ಫಿದಾ ಆಗಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸುಹಾನಾ ಅವರು ತಮ್ಮ ತಂದೆ ಶಾರುಖ್ ಖಾನ್ ಅವರ ಮುಂದಿನ ಚಿತ್ರ ಕಿಂಗ್​ನ ಭಾಗವಾಗಲಿದ್ದಾರೆ. ಇದು ಸುಜೋಯ್ ಘೋಷ್ ಜೊತೆ ಶಾರುಖ್ ಖಾನ್ ಅವರ ಮೊದಲ ಚಿತ್ರವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net