ಹೈದರಾಬಾದ್: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ( Pradeep Eshwar ) ಅವರು ಮೆಗಾಸ್ಟಾರ್ ಚಿರಂಜೀವಿ ( Chiranjeevi ) ಅವರನ್ನು ಹೈದರಾಬಾದ್ನಲ್ಲಿ ನಿನ್ನೆ (ಅ.14) ಭೇಟಿಯಾಗಿದ್ದಾರೆ. ಈ ಭೇಟಿ ಒಂದೊಳ್ಳೆ ಕೆಲಸಕ್ಕೆ ಎಂಬುದು ವಿಶೇಷ.
ಪ್ರದೀಪ್ ಈಶ್ವರ್ ಅವರು ನಟಿ ಚಿರಂಜೀವಿ ಅವರ ಚಿರಂಜೀವಿ ರಕ್ತ ನಿಧಿಗೆ ರಕ್ತದಾನ ( Blood Donate ) ಮಾಡಿದ್ದಾರೆ. ಅವರ ಜೊತೆಗೆ ಸಂಬಂಧಿ ರಮೇಶ್ ಬಾಬು ಕೂಡ ರಕ್ತದಾನ ಮಾಡಿದ್ದಾರೆ. ಚಿರಂಜೀವಿ ಅವರನ್ನು ಭೇಟಿಯಾಗಲು ಹೈದರಾಬಾದ್‌ಗೆ ಬಂದಿದ್ದ ಪ್ರದೀಪ್ ಈಶ್ವರ್, ಅದಕ್ಕೂ ಮೊದಲು ಚಿರಂಜೀವಿ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದ್ದಾರೆ.
ಇದಾದ ನಂತರ ಪ್ರದೀಪ್ ಈಶ್ವರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಅವರ ನಿವಾಸದಲ್ಲಿ ಗೌರವಾರ್ಥವಾಗಿ ಭೇಟಿಯಾದರು. ಈ ವೇಳೆ ಈಶ್ವರ್ ಅವರನ್ನು ಚಿರಂಜೀವಿ ವಿಶೇಷವಾಗಿ ಅಭಿನಂದಿಸಿದರು. ಈ ಕುರಿತು ಚಿರಂಜೀವಿ ನೇತ್ರ ಮತ್ತು ರಕ್ತನಿಧಿ ಕೇಂದ್ರ ಪ್ರಕಟಣೆ ಹೊರಡಿಸಿದೆ.
ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರು ಕಳೆದ ಕೆಲವು ದಿನಗಳಿಂದ ಚಿಕನ್ ಗುನ್ಯಾದಿಂದ ಬಳಲುತ್ತಿದ್ದಾರೆ. ಕೊಂಚ ಚೇತರಿಸಿಕೊಂಡಿರುವ ಅವರು ಇಂದು ನಾಗಬಂಧಂ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
AI ಮೇಲೆ ಅತಿಯಾದ ಅವಲಂಬನೆ ಸಲ್ಲ! ಕೃತಕ ಬುದ್ಧಿಮತ್ತೆಯಿಂದ ಹಣಕಾಸು ಸ್ಥಿರತೆಗೆ ಅಪಾಯ
ದೀಪಾವಳಿ ಮುನ್ನವೇ ನೌಕರರ ಮನ, ಮನೆ ಬೆಳಗಿಸಿದ ಕಂಪನಿ: ದುಬಾರಿ ಕಾರು, ಬೈಕ್ಗಳು ಗಿಫ್ಟ್! Chennai company