AI ಮೇಲೆ ಅತಿಯಾದ ಅವಲಂಬನೆ ಸಲ್ಲ! ಕೃತಕ ಬುದ್ಧಿಮತ್ತೆಯಿಂದ ಹಣಕಾಸು ಸ್ಥಿರತೆಗೆ ಅಪಾಯ

AI

ನವದೆಹಲಿ: ಜಾಗತಿಕ ಹಣಕಾಸು ಸೇವೆಗಳಲ್ಲಿ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ (AI) ಮತ್ತು ಮಶೀನ್ ಲರ್ನಿಂಗ್ (ಎಮ್​ಲ್) ಬಳಕೆಯು ಹಣಕಾಸಿನ ಸ್ಥಿರತೆಗೆ ಸವಾಲುಗಳನ್ನು ಸೃಷ್ಟಿಸಬಹುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಆರ್​ಬಿಐನ 90ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ದಾಸ್, ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್​ಗಳಂಥ ಆಧುನಿಕ ತಂತ್ರಜ್ಞಾನಗಳು ಹಣಕಾಸು ಸಂಸ್ಥೆಗಳಿಗೆ ವಹಿವಾಟು ಹಾಗೂ ಆದಾಯ ಹೆಚ್ಚಿಸುವ ಹೊಸ ಮಾರ್ಗಗಳನ್ನು ತೆರೆದಿವೆ. ಆದರೆ, ಇದೇ ವೇಳೆ ಈ ತಂತ್ರಜ್ಞಾನ ಆರ್ಥಿಕ ಸ್ಥಿರತೆಯ ಮೇಲೆ ಅಪಾಯ ಹೆಚ್ಚಿಸಿವೆ.

ಎಐನ ವ್ಯವಸ್ಥೆ ಈವರೆಗೂ ಸ್ಪಷ್ಟವಾಗಿಲ್ಲ. ಹಾಗಾಗಿ, ಹಣಕಾಸು ಸೇವಾ ಸಂಸ್ಥೆಗಳು ಜಾಗರುಕತೆಯಿಂದ ಎಐ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಕಡಿಮೆ ಸಂಖ್ಯೆಯ ತಂತ್ರಜ್ಞಾನ ಪೂರೈಕೆದಾರರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದಾಗ ಕೃತಕ ಬುದ್ಧಿಮತ್ತೆಯ ಮೇಲಿನ ಹೆಚ್ಚಿನ ಅವಲಂಬನೆಯು ಅಪಾಯಕ್ಕೆ ಕಾರಣವಾಗಬಹುದು ಎಂದರು. ಅಲ್ಲದೆ, ಜಾಗತೀಕ ರಾಜಕೀಯ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ ಮತ್ತಷ್ಟು ಬಲಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ವೆಚ್ಚ ತಗ್ಗಿಸಲು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಹಣಕಾಸು ಸೇವೆಗಳ ಪೂರೈಕೆದಾರರು ಕೃತಕ ಬುದ್ಧಿಮತ್ತೆ ಬಳಸುತ್ತಿದ್ದಾರೆ. ಹೆಚ್ಚುತ್ತಿರುವ ಎಐ ಬಳಕೆಯಿಂದ ಇವು ಸೈಬರ್ ದಾಳಿ ಮತ್ತು ದತ್ತಾಂಶ ಸೋರಿಕೆಗೆ ಒಳಗಾಗುವ ಅಪಾಯ ಇದೆ. ಬ್ಯಾಂಕ್​ಗಳು ಅಪಾಯ ತಗ್ಗಿಸುವ ಕ್ರಮಗಳನ್ನು ಕೈಗೊಳ್ಳುತ್ತಿವೆ.

| ಶಕ್ತಿಕಾಂತ್ ದಾಸ್ ಆರ್​ಬಿಐ ಗವರ್ನರ್

ಸಮಯ, ವೆಚ್ಚ ತಗ್ಗಲಿ

ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪ್ರಮುಖವಾದ ಸಾಗರೋತ್ತರ ಪಾವತಿ ವ್ಯವಸ್ಥೆಯ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಇತರ ಕೆಲವು ದೇಶಗಳು ಸಾಗರೋತ್ತರ ವೇಗದ ಪಾವತಿ ವ್ಯವಸ್ಥೆಗಳ ಸಂಪರ್ಕವನ್ನು ವಿಸ್ತರಿಸಲು ಈಗಾಗಲೇ ಪ್ರಯತ್ನಗಳನ್ನು ಪ್ರಾರಂಭಿಸಿವೆ ಎಂದಿದ್ದಾರೆ. ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ತಾಯ್ನಾಡಿಗೆ ಕಳೆದ ವರ್ಷ ರವಾನಿಸಿದ ಹಣದ ಮೊತ್ತವು 111 ಬಿಲಿಯನ್ ಡಾಲರ್ (9.33 ಲಕ್ಷ ಕೋಟಿ ರೂ. ಇತ್ತು).

ವರ್ಕ್​​ಔಟ್ ಆಗಿಲ್ಲ ಅಂದ್ರೆ…! ಉದ್ಯೋಗಿ ಕೊಟ್ಟ ರಾಜೀನಾಮೆ ಪತ್ರದಲ್ಲಿ ಅಡಗಿತ್ತು ಅಚ್ಚರಿ ಸಂಗತಿ | Resign Letter

Share This Article

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…