ಕೊನೆಗೂ ಕಿಚ್ಚನ ಆಕ್ರೋಶಕ್ಕೆ ಮಣಿದ ಬಿಗ್​ಬಾಸ್​ ಆಯೋಜಕರು! ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿಗೆ | Kichcha Sudeepa

Kichcha Sudeepa

ಬೆಂಗಳೂರು: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಎರಡು ವಾರಗಳನ್ನು ಪೂರ್ಣಗೊಳಿಸಿದೆ. ಇದರ ನಡುವೆ ಇದ್ದಕ್ಕಿದ್ದಂತೆ ಶೋ ತೊರೆಯುವುದಾಗಿ ನಿರೂಪಕ ಕಿಚ್ಚ ಸುದೀಪ್ ( Kichcha Sudeepa )​ ಘೋಷಣೆ ಮಾಡಿದರು. ಇದೇ ನನ್ನ ಕೊನೆಯ ಸೀಸನ್​ ಎಂದು ಹೇಳಿದ್ದಾರೆ. ಸದ್ಯ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಗ್​ಬಾಸ್​ ಆಯೋಜಕರ ಮೇಲೆ ಸುದೀಪ್​​ಗೆ ಅಸಮಾಧಾನವಿದೆ ಎಂದು ಹೇಳಲಾಗಿದೆ. ಅದಕ್ಕೆ ಕಾರಣ ಕನ್ನಡ ಕಡಗಣನೆ ಎನ್ನಲಾಗುತ್ತಿದೆ. ಸುದೀಪ್​ಗೆ ಅವಮಾನ ಸಹ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸುದೀಪ್​ ಇಲ್ಲದ ಬಿಗ್​ಬಾಸ್​ ಊಹಿಸಿಕೊಳ್ಳೋದು ಕೂಡ ಕಷ್ಟ ಎಂಬುದು ಅನೇಕರ ಅಭಿಪ್ರಾಯ. ಸುದೀಪ್​ ಆಕ್ರೋಶಕ್ಕೆ ಮಣಿದಿರುವ ಆಯೋಜಕರು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿದ್ದಾರೆಂದು ತಿಳಿದುಬಂದಿದೆ.

ಅಷ್ಟಕ್ಕೂ ಕಿಚ್ಚ ತಮ್ಮ ಎಕ್ಸ್​ ಖಾತೆಯಲ್ಲಿ ಹೇಳಿದ್ದೇನು ಅನ್ನೋದನ್ನು ನೋಡುವುದಾದರೆ, ಸೀಸನ್​ 11ರ ಗ್ರಾಂಡ್​ ಓಪನಿಂಗ್​ ಎಪಿಸೋಡ್ 9.9 ಟಿಆರ್​ಪಿಯೊಂದಿಗೆ​ ಹಿಂದಿನ ಎಲ್ಲ ದಾಖಲೆಗಳನ್ನು​ ಮುರಿದಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಕಿಚ್ಚ, ಬಿಗ್​ಬಾಸ್​ ಸೀಸನ್​ 11ರ ಮೇಲೆ ನೀವು ತೋರಿದ ಸ್ಪಂದನೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ನೀವು ತೋರಿದ ಪ್ರೀತಿ ಮತ್ತು ಗೌರವ ಎಂಥದ್ದು ಎಂಬುದನ್ನು ಟಿಆರ್​ಪಿ ನಂಬರ್​ ಹೇಳುತ್ತಿದೆ. ಸುಮಾರು 11 ವರ್ಷಗಳ ಕಾಲ ಒಟ್ಟಿಗೆ ನಡೆದಿದ್ದೇನೆ. ಇನ್ನು ಮುಂದೆ ನಾನು ಮಾಡಬೇಕಾಗಿರುವುದನ್ನು ಮಾಡುವ ಸಮಯ ಬಂದಿದೆ. ಬಿಗ್​ಬಾಸ್​ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ಈ ನಿರ್ಧಾರವನ್ನು ಕಲರ್ಸ್​ ಕನ್ನಡ ಮತ್ತು ಈ ಎಲ್ಲಾ ವರ್ಷಗಳಿಂದ ಬಿಗ್​ಬಾಸ್​ ಶೋ ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಸಾಧ್ಯವಾದಷ್ಟು ನಿಮ್ಮೆಲ್ಲರನ್ನು ರಂಜಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಪ್ಪುಗೆ ಸದಾ ಹೀಗೆ ಇರಲಿ ಎಂದು ಕಿಚ್ಚ ಬರೆದುಕೊಂಡಿದ್ದರು.

ಇದನ್ನೂ ಓದಿ: ಬಿಲ್ಡಿಂಗ್​ ಮೇಲಿಂದ ಮಹಿಳೆ ಮೇಲೆ ಬಿದ್ದ ವಾಟರ್​ ಟ್ಯಾಂಕ್​! ಸಣ್ಣ ಗಾಯವೂ ಆಗದೇ ಬಚಾವ್​ ಆಗಿದ್ದೇ ರೋಚಕ | Water Tank

ಕಿಚ್ಚನಿಗೆ ಅವಮಾನ?

ಕಿಚ್ಚನ ಈ ದಿಢೀರ್​ ನಿರ್ಧಾರದಿಂದ ಬಿಗ್​ಬಾಸ್​ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಎಷ್ಟೋ ಮಂದಿ ಸುದೀಪ್​ಗಾಗಿಯೇ ಬಿಗ್​ಬಾಸ್​ ಶೋ ನೋಡುತ್ತಿದ್ದರು. ಅವರಿಲ್ಲದ ಶೋ ಅನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ ಎಂದು ಹೇಳಿದವರಿದ್ದಾರೆ. ಹೀಗಾಗಿ ಕಿಚ್ಚ ಇದ್ದಕ್ಕಿದ್ದಂತೆ ಈ ನಿರ್ಧಾರ ಘೋಷಣೆ ಮಾಡಿದ್ದೇಕೆ ಎನ್ನುತ್ತಿದ್ದಾರೆ. ಇದರ ನಡುವೆ ಕಿಚ್ಚನಿಗೆ ಅವಮಾನ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂಥದ್ದೊಂದು ಗಂಭೀರ ಆರೋಪವನ್ನು ರೂಪೇಶ್​ ರಾಜಣ್ಣ ಮಾಡಿದ್ದಾರೆ. ಬಿಗ್​ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೇ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್​ ಬಿಗ್​ಬಾಸ್ ನಿರೂಪಣೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಏ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್​ಬಾಸ್ ಬಿಡಿ ಇಲ್ಲ ಬಿಗ್​ಬಾಸ್ ನಿಲ್ಲಿಸಬೇಕಾಗುತ್ತದೆ. ಅಸಲಿ ವಿಷಯವನ್ನು ನಾಳೆ ಮಾತಾಡ್ತೀನಿ ಎಂದು ರೂಪೇಶ್​ ರಾಜಣ್ಣ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು.

ತಪ್ಪು ಸರಿಪಡಿಸಿಕೊಳ್ಳಲು ಒಪ್ಪಿದ ಆಯೋಜಕರು​

ಇದೀಗ ಮತ್ತೊಂದು ಟ್ವೀಟ್​ ಮಾಡಿರುವ ರೂಪೇಶ್​ ರಾಜಣ್ಣ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್​ಬಾಸ್ ಆಯೋಜಕರು ಒಪ್ಪಿದ್ದಾರೆ. ಅವರಿಗೆ ಧನ್ಯವಾದಗಳು. ಕನ್ನಡದ ಪರವಾಗಿ ನಿಂತ ಸುದೀಪ್​ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ. ಬದಲಾವಣೆ ನೀವೇ ನೋಡುವಿರಿ. ಜೈ ಕರ್ನಾಟಕ ಎಂದು ರೂಪೇಶ್ ರಾಜಣ್ಣ ಟ್ವೀಟ್​ ಮಾಡಿದ್ದಾರೆ. ಕಿಚ್ಚ ಸುದೀಪ್​ ಆಕ್ರೋಶಕ್ಕೆ ಮಣಿದು ಆಯೋಜಕರು ತಪ್ಪು ಸರಿ ಮಾಡಿಕೊಳ್ಳಲು ಒಪ್ಪಿದಂತೆ ಕಾಣುತ್ತಿದೆ.

ಬಿಗ್​ಬಾಸ್​​ ಶೋಗೆ ಸುದೀಪ್ ದಿಢೀರ್​ ಗುಡ್​ಬೈ ಹೇಳಿದ್ದೇಕೆ? ಕಿಚ್ಚನಿಗಾದ ನೋವೇನು? ಶಾಕಿಂಗ್​ ಸಂಗತಿ ಬಯಲು​ | Kichcha Sudeepa

ಆ ನಟಿಯ ಕಾರಣಕ್ಕೆ ಜಗಳವಾಡಿ 5 ವರ್ಷ ಮಾತುಬಿಟ್ಟಿದ್ದರು ಶಾರುಖ್​-ಸಲ್ಮಾನ್​! ಜುಲೈ 17ರ ರಹಸ್ಯ ಬಯಲು | Shah Rukh – Salman

Share This Article

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…