ದೃಶ್ಯಂ ಸಿನಿಮಾ ನಿರ್ದೇಶಕನಿಗೆ ಶಹಬ್ಬಾಸ್​ಗಿರಿ ಕೊಟ್ಟ ಈ ಖ್ಯಾತ ನಿರ್ದೇಶಕ!

dm
Drishyam 2
Published on

ಹೈದರಾಬಾದ್: ಮಲೆಯಾಳಂನ ಸೂಪರ್​ ಹಿಟ್ ಕ್ರೈಂ ಥ್ರಿಲ್ಲರ್ ಸಿನಿಮಾ ದೃಶ್ಯಂ ಬಗ್ಗೆ ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ದೃಶ್ಯಂ ಹಾಗೂ ದೃಶ್ಯಂ 2 ನಿರ್ದೇಶಕ ಜೀತು ಜೋಸೆಪ್ ಅವರಿಗೆ ವೈಯಕ್ತಿಕ ಸಂದೇಶ ಕಳಿಸಿರುವ ರಾಜಮೌಳಿ ಅವರು, ಜೀತು ಅವರನ್ನು ಕೊಂಡಾಡಿದ್ದಾರೆ.

''ಹಾಯ್ ಜೀತು, ನಾನು ರಾಜಮೌಳಿ, ನಿರ್ದೇಶಕ, ಐದು ದಿನದ ಹಿಂದೆ ದೃಶ್ಯಂ 2 ನೋಡಿದೆ. ಚಿತ್ರದ ನಿರ್ದೇಶನ, ಸ್ಕ್ರೀನ್ ಪ್ಲೇ, ನಟನೆ, ಎಡಿಟಿಂಗ್ ಎಲ್ಲವೂ ಅದ್ಭುತ. ಇದೊಂದು ಮಾಸ್ಟರ್​ಪೀಸ್, ದೃಶ್ಯಂ ಮೊದಲನೇ ಭಾಗಕ್ಕೆ ಎಲ್ಲಿಯೂ ದಕ್ಕೆ ಆಗದಂತೆ ದೃಶ್ಯಂ 2 ರಲ್ಲಿ ನಿರೂಪಣೆ ಮಾಡಿದ್ದು ನಿಮ್ಮ ಹೆಗ್ಗಳಿಕೆ. ಮುಂದೆ ಇಂತಹ ಇನ್ನಷ್ಟು ಮಾಸ್ಟರ್​ಪೀಸ್​ಗಳು ನಿಮ್ಮಿಂದ ನಾವು ನೋಡುವಂತಾಗಲಿ'' ಎಂದು ರಾಜಮೌಳಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಇದರಿಂದ ತೀವ್ರ ಸಂತೋಷಗೊಂಡಿರುವ ಜೀತ ಜೋಸೆಪ್ ಧನ್ಯವಾದ ಸೂಚಿಸಿ, ರಾಜಮೌಳಿ ಸರ್ ನೀವು ನನ್ನ ದಿನವನ್ನು ಸ್ಮರಣೀಯವಾಗಿಸಿದಿರಿ ಎಂದು ಧನ್ಯವಾದ ಹೇಳಿದ್ದಾರೆ.

ಸೂಪರ್​ಸ್ಟಾರ್ ಮೋಹನ್​ಲಾಲ್ ಮೀನಾ ನಟನೆಯ ದೃಶ್ಯಂ 2 ಫೆ 19 ರಂದು ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆಯಾಗಿ ಸಾಕಷ್ಟು ಜನ ಮನ್ನಣೆ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net