ಬೆಂಗಳೂರಿನ ಜೊಮ್ಯಾಟೋ ಡೆಲಿವರಿ ಬಾಯ್​ ಪರ ನಿಂತ ಬಾಲಿವುಡ್​ ತಾರೆ!

zomatto
Published on

ಬೆಂಗಳೂರು: ನಗರದ ಎಲೆಕ್ಟ್ರಾನಿಕ್​ ಸಿಟಿಯಲ್ಲಿ ಆನ್​ಲೈನ್​ ಫುಡ್​ ಆರ್ಡರ್​ ಮಾಡಿದ್ದ ಯುವತಿಯ ಮೇಲೆ ಡೆಲಿವರಿ ಬಾಯ್​ ಹಲ್ಲೆ ಮಾಡಿದ್ದಾನೆ ಎನ್ನುವ ಪ್ರಕರಣ ದೇಶದಾದ್ಯಂತ ಚರ್ಚೆಯಲ್ಲಿದೆ. ಯುವತಿ ಮಾಡಿದ್ದ ದೂರು ಆಕೆಗೇ ತಿರುಗುಮಂತ್ರವಾಗಿದ್ದು, ಡೆಲಿವರಿ ಬಾಯ್​ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಇದೀಗ ಬಾಲಿವುಡ್​ನ ಪ್ರಸಿದ್ಧ ತಾರೆಯೊಬ್ಬರು ಡೆಲಿವರಿ ಬಾಯ್​ ಬೆಂಬಲಕ್ಕೆ ನಿಂತಿದ್ದಾರೆ.

ಹೌದು! ಬಾಲಿವುಡ್​ನ ಪ್ರಸಿದ್ಧ ನಟಿ ಪರಿಣಿತಿ ಚೋಪ್ರಾ ಜೊಮ್ಯಾಟೋ ಡೆಲಿವರಿ ಬಾಯ್​ ಪರವಾಗಿ ಟ್ವೀಟ್​ ಮಾಡಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆಗಳನ್ನು ಪತ್ತೆ ಮಾಡಬೇಕು. ಡೆಲಿವರಿ ಬಾಯ್​ ಮುಗ್ಧನಾಗಿದ್ದಾನೆ, ನಾನು ಅವನ ಮಾತನ್ನು ನಂಬುತ್ತೇನೆ. ಆ ಯುವತಿಯನ್ನು ಸರಿಯಾಗಿ ಪ್ರಶ್ನಿಸಿ. ಇದು ಅಮಾನವೀಯತೆಯ ಮತ್ತು ನಾಚಿಕೆಗೇಡಿನ ಘಟನೆ. ನಾನು ಡೆಲಿವರಿ ಬಾಯ್​ಗೆ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಎನಿಸಿಕೊಂಡಿರುವ ಹಿತೇಶಾ ಚಂದ್ರಾಣಿ, ಮಾರ್ಚ್​ 9ರಂದು ಜೊಮ್ಯಾಟೋದಲ್ಲಿ ಊಟ ಆರ್ಡರ್​ ಮಾಡಿದ್ದಳು. ಮಧ್ಯಾಹ್ನ 3.30ಕ್ಕೆ ತರಬೇಕಿದ್ದ ಊಟವನ್ನು ಕಾಮರಾಜ್​ ಹೆಸರಿನ ಡೆಲಿವರಿ ಬಾಯ್​ ಒಂದು ಗಂಟೆ ತಡವಾಗಿ ತಂದಿದ್ದ. ಈ ವೇಳೆ ಅವರಿಬ್ಬರ ನಡುವೆ ಜಗಳ ನಡೆದಿದೆ. ಕಾಮರಾಜ್​ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ, ಪಂಚ್​ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಆಕೆಯೇ ತನ್ನ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾಗಿ ಕಾಮರಾಜ್​ ಹೇಳಿದ್ದಾನೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net