More

    ಬಿಗ್​ಬಾಸ್​ನಿಂದ ಹೊರಬರುತ್ತಿದ್ದಂತೆಯೇ ಧನುಶ್ರೀಗೆ ಸಿಕ್ತು ಬಿಗ್​ ಚಾನ್ಸ್​! ಮತ್ತೆ ಮೋಡಿ ಮಾಡ್ತಾರಾ ಈ ಟಿಕ್​ಟಾಕ್​ ಸ್ಟಾರ್?

    ಬೆಂಗಳೂರು: ರಾತ್ರಿ ಬೆಳಗಾಗುಷ್ಟರಲ್ಲಿ ಟಿಕ್​ಟಾಕ್​ ಸ್ಟಾರ್​ ಆಗಿ ಬದಲಾಗಿಬಿಟ್ಟ ಧನುಶ್ರೀಗೆ ಈ ವರ್ಷ ಅದೃಷ್ಟ ಒಲಿದಿರುವುದಂತು ಗ್ಯಾರಂಟಿ. ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಆದ ಬಿಗ್​ಬಾಸ್​ನಲ್ಲಿ ಕಾಣಿಸಿಕೊಂಡು, ಇದೀಗ ಅದರಿಂದ ಹೊರಬಿದ್ದಿರುವ ಧನುಶ್ರೀಗೆ ಮತ್ತೊಂದು ದೊಡ್ಡ ಚಾನ್ಸ್​ ಸಿಕ್ಕಿದೆ.

    ಹೌದು! ಬರೀ ಟಿಕ್​ಟಾಕ್​ನಲ್ಲಿ ಕಾಣಿಸಿಕೊಂಡು ಎಲ್ಲರ ಮನಸ್ಸು ಗೆದ್ದಿರುವ ಧನುಶ್ರೀ ಸ್ಯಾಂಡಲ್​ವುಡ್​ಗೆ ಎಂಟರ್​ ಆಗಲು ಸಿದ್ಧವಾಗಿದ್ದಾರೆ. ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಧನುಶ್ರೀ ಸಹಿ ಹಾಕಿದ್ದಾರಂತೆ. ಅದು ರೊಮ್ಯಾಂಟಿಕ್​ ಲವ್​ ಸ್ಟೋರಿ ಆಗಿರಲಿದ್ದು, ಧನುಶ್ರೀಗೆ ತುಂಬಾ ಹತ್ತಿರವಾಗುವಂತಹ ಸಿನಿಮಾವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್​ ಕೆಲಸವನ್ನು ಮುಗಿಸುವ ಹಂತಕ್ಕೆ ಬಂದಿರುವ ಚಿತ್ರತಂಡ, ಕೆಲ ದಿನಗಳಲ್ಲಿ ಶೂಟಿಂಗ್​ ಆರಂಭಿಸಲಿದೆ ಎನ್ನಲಾಗಿದೆ. ಈ ಕುರಿತಾಗಿ ಧನುಶ್ರೀ ಕೂಡ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ‘Something new coming up’ ಎಂದು ಒಂದು ತಂಡದೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಟಿಕ್​ಟಾಕ್​ನಲ್ಲಿ ಗೆದ್ದಿರುವ ಧನುಶ್ರೀ ಬಿಗ್​ಬಾಸ್​ನಲ್ಲಿ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ಇದೀಗ ಸಿನಿಮಾ ಮೂಲಕ ಮೋಡಿ ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)

     

    View this post on Instagram

     

    A post shared by DHANUSHREE🦋 (@dhanushree7_)

     

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬೆಂಗಳೂರಿನ ಜೊಮ್ಯಾಟೋ ಡೆಲಿವರಿ ಬಾಯ್​ ಪರ ನಿಂತ ಬಾಲಿವುಡ್​ ತಾರೆ!

    ಬಿಹಾರದಲ್ಲಿ ಹೆಂಡತಿ, ದೆಹಲಿಯಲ್ಲಿ ಗರ್ಲ್​ಫ್ರೆಂಡ್​! 20ರ ಯುವತಿಯೊಂದಿಗೆ 40ರ ಡ್ರೈವರ್​ ರಿಲೇಷನ್​ಶಿಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts