

ಬೆಂಗಳೂರು: ನಟಿ ದಿಶಾ ಪೂವಯ್ಯ ಮತ್ತು ಸ್ಪರ್ಶ ರೇಖಾ ಜತೆಯಾಗಿ ಮಹಿಳಾ ಪ್ರಧಾನ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಆ ಚಿತ್ರದ ಹೆಸರು ‘ಪರಿಶುದ್ಧಂ’. ಗಂಡ-ಹೆಂಡತಿ ನಡುವಿನ ಸಂಬಂಧ ಹೇಗಿರಬೇಕು? ಅದೆಷ್ಟು ಪರಿಶುದ್ಧವಾಗಿರಬೇಕು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ವಿಶೇಷ ಏನೆಂದರೆ ಕನ್ನಡದ ಜತೆಗೆ ತೆಲುಗು, ತಮಿಳಿನಲ್ಲಿಯೂ ಈ ಚಿತ್ರ ಸಿದ್ಧವಾಗುತ್ತಿದೆ.
ಇಲ್ಲಿ ಮನಃಶಾಸ್ತ್ರಜ್ಞೆಯಾಗಿ ಸ್ಪರ್ಶ ರೇಖಾ ಕಾಣಿಸಿಕೊಂಡರೆ, ಡಿಸಿಪಿಯಾಗಿ ದಿಶಾ ಪೂವಯ್ಯ ನಟಿಸುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಅರ್ಧ ಭಾಗದ ಶೂಟಿಂಗ್ ಈಗಾಗಲೇ ಮುಗಿದಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಾಕ್, ಮಲೆಷಿಯಾದಲ್ಲಿಯೂ ಶೂಟಿಂಗ್ ನಡೆಸುವುದು ತಂಡದ ಪ್ಲಾನ್. ಕೀರ್ತಿ ಕೃಷ್ಣ, ಭಾರ್ಗವ್ ನಾಯಕರಾಗಿದ್ದಾರೆ.
ಕಾರ್ತಿಕ್ ವೆಂಕಟೇಶ್ ನಿರ್ದೇಶನದ ಈ ಚಿತ್ರವನ್ನು ಕುಮಾರ್ ರಾಥೋಡ್ ನಿರ್ವಿುಸುತ್ತಿದ್ದಾರೆ. ಕೃಷ್ಣ ಸಾರಥಿ ಛಾಯಾಗ್ರಹಣವಿದೆ.