ಅವನನ್ನು ಸಪೋರ್ಟ್​ ಮಾಡೋ ನಾಯಕಿಯರಿಗೆ ನಾಚಿಕೆ ಆಗಬೇಕು … ಸಲ್ಮಾನ್​ ವಿರುದ್ಧ ಹರಿಹಾಯ್ದ ಸೋಮಿ ಅಲಿ

Salman Khan - Somy Ali
Published on

ಮುಂಬೈ: ಬಾಲಿವುಡ್​ ನಟಿ ಸೋಮಿ ಅಲಿಗೆ ಸಲ್ಮಾನ್​ ಖಾನ್​ ಕಂಡರೆ ಭಯಂಕರ ಸಿಟ್ಟು. ಒಂದು ಕಾಲಕ್ಕೆ ಸಲ್ಮಾನ್​ ಖಾನ್​ ಗೆಳತಿಯಾಗಬೇಕು ಎಂದು ಭಾರತಕ್ಕೆ ಬಂದಿದ್ದ ಸೋಮಿ, ಆ ನಂತರ ಸಲ್ಮಾನ್​ಗೆ ಹತ್ತಿರವಾಗಿ, ಅವರಿಂದ ಸಾಕಷ್ಟು ನೋವು ತಿಂದು ಸದ್ದಿಲ್ಲದೆ ಅದೆಲ್ಲಿಗೋ ಮಾಯವಾದ ಹುಡುಗಿ. ಇತ್ತೀಚಿನ ವರ್ಷಗಳಲ್ಲಿ ಪುನಃ ವಾಪಸ್ಸಾಗಿರುವ ಸೋಮಿ, ಅವಕಾಶ ಸಿಕ್ಕಾಗಲೆಲ್ಲ ಸಲ್ಮಾನ್​ ವಿರದ್ಧ ಹರಿಹಾಯುತ್ತಲೇ ಇದ್ದಾರೆ.

ಕೆಲವು ತಿಂಗಳುಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಸಲ್ಮಾನ್​ ಬೈದು ಬೆವರಿಳಿಸಿದ್ದ ಸೋಮಿ, ಈಗ ಪುನಃ ಇಂದು ಬೆಳಿಗ್ಗೆ ಇನ್​ಸ್ಟಾಗ್ರಾಂನಲ್ಲಿ ಸಲ್ಮಾನ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಸಪೋರ್ಟ್​ ಮಾಡುತ್ತಿರುವ ನಟ-ನಟಿಯರನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು, ಅವರಿಗೆಲ್ಲ ನಾಚಿಕೆ ಆಗಬೇಕು ಎಂದು ಹೇಳಿದ್ದಾರೆ.

ಈ ಕುರಿತ ಬರೆದುಕೊಂಡಿರುವ ಸೋಮಿ, 'ನೀನು ಬೇಕಾದರೆ ಭಾರತದಲ್ಲಿ ನನ್ನ ಪ್ರದರ್ಶನಗಳನ್ನು ಬ್ಯಾನ್​ ಮಾಡಿಸು ಅಥವಾ ನನ್ನ ಮೇಲೆ ಕೇಸ್​ ಹಾಕಿಸು. ನಾನು ಕೇರ್​ ಮಾಡುವುದಿಲ್ಲ. ನನ್ನನ್ನು ಪಾರು ಮಾಡುವುದಕ್ಕೆ 50 ಲಾಯರ್​ಗಳಿದ್ದಾರೆ. ನೀನು ಸಿಗರೇಟ್​ನಿಂದ ಸುಟ್ಟಿದ್ದಿಕ್ಕೆ, ನನ್ನನ್ನು ದೈಹಿಕವಾಗಿ ಹಿಂಸಿಸಿದ್ದಿಕ್ಕೆ ಮತ್ತು ನನ್ನನ್ನು ಇಷ್ಟು ವರ್ಷ ನರಳಾಡುವಂತೆ ಮಾಡುವುದಕ್ಕೆ ನಿನಗೆ ಶಿಕ್ಷೆ ಕೊಡಿಸುವುದಕ್ಕೆ ಹಲವು ಲಾಯರ್​ಗಳಿದ್ದಾರೆ. ನಿನಗೆ ಸಪೋರ್ಟ್​ ಮಾಡುತ್ತಿರುವ ನಾಯಕಿಯರಿಗೆ ನಾಚಿಕೆ ಆಗಬೇಕು. ಅಮಾಯಕ ಹೆಣ್ಣುಮಕ್ಕಳಿಗೆ ಹೊಡೆಯುವ ಇಂಥವನನ್ನು ಸಪೋರ್ಟ್​ ಮಾಡುವವರಿಗೆ ನಾಚಿಕೆ ಆಗಬೇಕು. ಯುದ್ಧಕ್ಕೆ ಹೋಗುವುದಕ್ಕೆ ಇದು ಸರಿಯಾದ ಸಮಯ' ಎಂದು ಸೋಮಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಸಲ್ಮಾನ್​ ಹೆಸರನ್ನು ಎತ್ತೆದೆಯೇ ಅವರ ವಿರುದ್ಧ ಹರಿಹಾಯತ್ತಿದ್ದ ಸೋಮಿ, ಈ ಬಾರಿ ಸಲ್ಮಾನ್​ ಜತೆಗಿರುವ ಹಳೆಯ ಫೋಟೋವೊಂದನ್ನು ಶೇರ್​ ಮಾಡಿಕೊಂಡು, ಅವರ ವಿರುದ್ಧ ತೊಡೆತಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net