ಗಾಯಗೊಂಡ ಸಿಂಹದಂತೆ ಅಜಯ್​ ದೇವ್ಗನ್​ ಗರ್ಜನೆ ; 'ಸಿಂಘಂ ಅಗೇನ್​' ಫಸ್ಟ್​ ಲುಕ್​ ಬಿಡುಗಡೆ

singham
Published on

ರೋಹಿತ್ ಶೆಟ್ಟಿ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಕಾಪ್ ಯೂನಿವರ್ಸ್’ನ ಐದನೇ ಚಿತ್ರ ‘ಸಿಂಘಂ ಅಗೇನ್’. ‘ಸಿಂಘಂ’, ‘ಸಿಂಘಂ ರಿಟರ್ನ್ಸ್’, ‘ಸಿಂಬಾ’ ಹಾಗೂ ‘ಸೂರ್ಯವಂಶಿ’ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ ‘ಸಿಂಘಂ ಅಗೇನ್’ ಚಿತ್ರದ ಸಿದ್ಧತೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್​, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಲುಕ್‌ಗಳು ರಿವೀಲ್ ಆಗಿದ್ದು, ಇದೀಗ ಅಜಯ್ ದೇವ್ಗನ್ ಲುಕ್ ರಿಲೀಸ್ ಮಾಡಲಾಗಿದೆ.

ಗಾಯಗೊಂಡು ಘರ್ಜಿಸುತ್ತಿರುವ ಸಿಂಹದಂತೆ ಅಜಯ್ ದೇವ್ಗನ್ ಕಾಣಿಸಿಕೊಂಡಿದ್ದಾರೆ. ಬಾಜೀರಾವ್ ಸಿಂಘಂ ಪಾತ್ರದಲ್ಲಿ ಅಜಯ್ ದೇವ್ಗನ್, ಪತ್ನಿ ಅವನಿ ಬಾಜೀರಾವ್ ಸಿಂಘಂಆಗಿ ಕರೀನಾ ಕಪೂರ್, ಸೂರ್ಯವಂಶಿ ಪಾತ್ರದಲ್ಲಿ ಅಕ್ಷಯ್ ಕುಮಾರ್, ಸಂಗ್ರಾಮ್ ಸಿಂಬಾ ಭಾಲೇರಾವ್ ಪಾತ್ರದಲ್ಲಿ ರಣವೀರ್ ಸಿಂಗ್, ಶಕ್ತಿ ಶೆಟ್ಟಿಯಾಗಿ ದೀಪಿಕಾ ಪಡುಕೋಣೆ ಹಾಗೂ ಎಸಿಪಿ ಸತ್ಯ ಪಾತ್ರದಲ್ಲಿ ಟೈಗರ್ ಶ್ರಾಫ್​ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರವೊಂದರಲ್ಲಿ ಈ ಎಲ್ಲ ಸ್ಟಾರ್‌ಗಳು ತೆರೆ ಹಂಚಿಕೊಳ್ಳಲಿದ್ದು, ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net