More

  ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್​ ಆಗಲಿರುವ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?

  ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಎಂಬ ಕಾನ್ಸೆಪ್ಟ್ ಹೆಚ್ಚು ಸದ್ದು ಮಾಡುತ್ತಿದೆ. ಎಲ್ಲ ಚಿತ್ರರಂಗದವರೂ ಒಂದೇ ಭಾಷೆಗೆ ಸೀಮಿತವಾಗದೆ ದೊಡ್ಡ ಸ್ಟಾರ್‌ಗಳು, ಮೆಗಾ ಬಜೆಟ್ ಸಿನಿಮಾಗಳನ್ನು ನಾಲ್ಕೈದು ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಆ ಪರಿಕಲ್ಪನೆಯೂ ಹಳೆಯದಾಗಿ, ಪ್ಯಾನ್ ವರ್ಲ್ಡ್ ಬರುವ ನಿರೀಕ್ಷೆಗಳಿವೆ.

  ಇದನ್ನೂ ಓದಿ : ನನ್ನ ಕೋಣೆಗೆ ಬಾ…ಸ್ಟಾರ್​ ನಟನ ಕರಾಳ ಮುಖವನ್ನು ಬಿಗ್​ಬಾಸ್​​ ಮನೆಯಲ್ಲಿ ತೆರೆದಿಟ್ಟ ನಟಿ

  ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್​ ಆಗಲಿರುವ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?

  ಅದಕ್ಕೆ ಉದಾಹರಣೆ ತಮಿಳಿನ ‘ಕಂಗುವ‘ ಚಿತ್ರ. ‘ವೀರಂ’, ‘ವಿವೇಕಂ’, ‘ಅನ್ನಾಥೆ’ ಸೇರಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ತಮಿಳು ನಿರ್ದೇಶಕ ಶಿವಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರವಿದು. ಚಿತ್ರಕ್ಕೆ ಸೂರ್ಯ ನಾಯಕನಾಗಿದ್ದು, ಈಗಾಗಲೇ ಅವರ ಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಜತೆಗೆ ‘ಕಂಗುವ’ ಮೂಲಕ ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ಕಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಬರೋಬ್ಬರಿ 350 ಕೋಟಿ ರೂ. ಬಜೆಟ್‌ನಲ್ಲಿ ಮೂಡಿಬರಲಿದೆ ಎನ್ನಲಾಗಿದೆ.

  ಇದನ್ನೂ ಓದಿ : ಡರ್ಟಿ ಗೇಮ್‌-ಫೇರ್​ ಗೇಮ್‌: ದೊಡ್ಮನೆಯಲ್ಲಿ ಆಟ ಹೋಗಿ ಹೊಡೆದಾಟ ಶುರುವಾಯ್ತಾ?

  ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್​ ಆಗಲಿರುವ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?
  Thambi Ramaiah, Umapathy, Radha Ravi, Siva & Others At The Maniyar Kudumbam Audio Launch

  ಇದುವರೆಗೂ ತಮಿಳು ಸಿನಿಮಾಗಳು ತಲುಪಿರದ ಹಲವು ಹೊಸ ದೇಶಗಳು, ಭಾಷೆಗಳು ಸೇರಿ ಚಿತ್ರವನ್ನು ವಿಶ್ವಾದ್ಯಂತ 38 ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಸಿನಿಮಾ 2ಡಿ, 3ಡಿ, ಐಮ್ಯಾಕ್ಸ್ ಾರ್ಮ್ಯಾಟ್‌ಗಳಲ್ಲಿ ರಿಲೀಸ್ ಆಗಲಿದ್ದು, ಈಗಾಗಲೇ ನಿರ್ಮಾಪಕರು ಅಂತಾರಾಷ್ಟ್ರೀಯ ಮಟ್ಟದ ವಿತರಕರ ಜತೆ ಮಾತುಕತೆ ನಡೆಸಿದ್ದಾರೆ. ಸದ್ಯ ‘ಕಂಗುವ’ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

  ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್​ ಆಗಲಿರುವ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts