More

  5.9 ಅಡಿ ಕಟೌಟ್! ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ಚಿತ್ರರಂಗಕ್ಕೆ ಪ್ರಿಯಾಂಕಾ ಎಂಟ್ರಿ

  | ಹರ್ಷವರ್ಧನ್ ಬ್ಯಾಡನೂರು

  ಆರಡಿ ಮೀರಿದ ಹೀರೋಗಳೇ ಅಪರೂಪ. ಅದೇ ರೀತಿ ಐದೂವರೆ ಅಡಿ ದಾಟಿದ ನಾಯಕಿಯರೂ ಅಪರೂಪ. ಹೀಗಿರುವಾಗ ಕನ್ನಡ ಚಿತ್ರರಂಗಕ್ಕೆ 5.9 ಅಡಿಯಿರುವ ನಟಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಶ್, ರಚಿತಾ ರಾಮ್ ನಟಿಸಿರುವ ‘ಬ್ಯಾಡ್ ಮ್ಯಾನರ್ಸ್‌’ ಚಿತ್ರದ ಮೂಲಕ ಶಿವಮೊಗ್ಗ ಮೂಲದ ಪ್ರಿಯಾಂಕಾ ಕುಮಾರ್ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡುತ್ತಿದ್ದಾರೆ. ವಿಶೇಷ ಅಂದರೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಅವರು ಹ್ಯಾಟ್ರಿಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅದೇ ಖುಷಿಯಲ್ಲಿ ಪ್ರಿಯಾಂಕಾ ವಿಜಯವಾಣಿ ಜತೆ ಇತ್ತೀಚೆಗಷ್ಟೆ ಮಾತಿಗೆ ಸಿಕ್ಕಿದ್ದರು.

  5.9 ಅಡಿ ಕಟೌಟ್! ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ಚಿತ್ರರಂಗಕ್ಕೆ ಪ್ರಿಯಾಂಕಾ ಎಂಟ್ರಿ
  • ಚಿತ್ರರಂಗಕ್ಕೆ ಆಗಮನವಾಗಿದ್ದು ಹೇಗೆ?
  • ನಾನು ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವಳು. ಆರನೇ ತರಗತಿವರೆಗೂ ಅಲ್ಲಿ ಓದಿ ನಂತರ ಮೈಸೂರಿಗೆ ಶಿಫ್ಟ್​​ ಆದೆವು. ನಮ್ಮೂರ ಕಡೆ ಯಕ್ಷಗಾನ, ನಾಟಕ ಹೆಚ್ಚು. ಅಪ್ಪನ ಜತೆ ನೋಡುತ್ತಿದ್ದ ನನಗೆ ಚಿಕ್ಕವಯಸ್ಸಿನಿಂದಲೂ ಆ್ಯಕ್ಟಿಂಗ್ ಬಗ್ಗೆ ಇಂಟರೆಸ್ಟ್ ಇತ್ತು. ಕ್ರಮೇಣ ಜಾಲತಾಣದಲ್ಲಿ ಆಡಿಷನ್ ಬಗ್ಗೆ ಮಾಹಿತಿ ನೋಡಿ ಮೈಸೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದು ಆಡಿಷನ್ ಕೊಡುತ್ತಿದ್ದೆ. ಹೀಗೆ ಮೂರು ವರ್ಷ ಓಡಾಡಿದ ಬಳಿಕ ‘ಕೃಷ್ಣ ತುಳಸಿ’ ಧಾರಾವಾಹಿಯಲ್ಲಿ ಮೊದಲ ಅವಕಾಶ ದೊರೆಯಿತು. ಕರೊನಾ ಸಮಯದಲ್ಲಿ ‘ಬ್ಯಾಡ್ ಮ್ಯಾನರ್ಸ್‌’ ಆಡಿಷನ್‌ನಲ್ಲಿ ಭಾಗಿಯಾಗಿ, ಅದರಲ್ಲೂ ನಟಿಸಲು ಅವಕಾಶ ಪಡೆದೆ.
  • ‘ಬ್ಯಾಡ್ ಮ್ಯಾನರ್ಸ್’ ನಿಮ್ಮ ಪಾತ್ರ?
  • ಒಬ್ಬ ಶ್ರೀಮಂತ ಉದ್ಯಮಿಯ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಶ್ರೀಮಂತರ ಮಕ್ಕಳನ್ನು ಹೊರಗಿನವರು ಹೇಗೆ ಮಿಸ್‌ಯೂಸ್ ಮಾಡಿಕೊಳ್ಳುತ್ತಾರೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ.

  ಇದನ್ನೂ ಓದಿ : ‘ಗೂಢಚಾರಿ 2’ ಚಿತ್ರದಲ್ಲಿ ಅಡಿವಿಶೇಷ್​ಗೆ ಜೋಡಿಯಾದ ಬಾಲಿವುಡ್​ ನಟಿ ಯಾರು ಗೊತ್ತಾ?

  5.9 ಅಡಿ ಕಟೌಟ್! ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ಚಿತ್ರರಂಗಕ್ಕೆ ಪ್ರಿಯಾಂಕಾ ಎಂಟ್ರಿ
  • ದುನಿಯಾ ಸೂರಿ ನಿರ್ದೇಶನದಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?
  • ಆಡಿಷನ್‌ನಲ್ಲಿ ಆಯ್ಕೆಯಾಗಿದ್ದೆ. ಆದರೆ, ನನಗೆ ಕಥೆ ಅಥವಾ ಪಾತ್ರದ ಬಗ್ಗೆ ಗೊತ್ತಿರಲಿಲ್ಲ. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ ತಪ್ಪಾದರೆ ಹೇಗೆ ಎಂಬ ನರ್ವಸ್ ಇತ್ತು. ರಾ ಸಿನಿಮಾ ಆದ ಕಾರಣ, ಸರಳವಾಗಿ ನಟಿಸಬೇಕಿತ್ತು. ಹೆಚ್ಚು ನಾಟಕೀಯವಾಗಿ ಅಭಿನಯಿಸಬೇಕಿರಲಿಲ್ಲ. ಶೂಟಿಂಗ್‌ಗೂ ಮುನ್ನ ಸೂರಿ ಸರ್ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದರು. ಹೀಗಾಗಿ ಸವಾಲು ಅಂತನಿಸಲಿಲ್ಲ. ಅವರ ನಿರ್ದೇಶನದಲ್ಲಿ ಡೆಬ್ಯೂ ಮಾಡುತ್ತಿರುವ ಬಗ್ಗೆ ತುಂಬ ಖುಷಿಯಿದೆ.
  • ‘ಬ್ಯಾಡ್ ಮ್ಯಾನರ್ಸ್‌’ ರಿಲೀಸ್‌ಗೂ ಮುನ್ನವೇ ಬಿಜಿಯಾಗಿದ್ದೀರಿ…
  • ಎ.ಪಿ.ಅರ್ಜುನ್ ಅವರ ನಿರ್ದೇಶನದಲ್ಲಿ ‘ಅದ್ದೂರಿ ಲವರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಆದರೆ, ಅವರು ಸದ್ಯ ‘ಮಾರ್ಟಿನ್’ ಚಿತ್ರದಲ್ಲಿ ಬಿಜಿಯಿರುವ ಕಾರಣ ಮುಂದಿನ ವರ್ಷ ನಮ್ಮ ಸಿನಿಮಾ ಕೆಲಸ ಪ್ರಾರಂಭವಾಗುವ ನಿರೀಕ್ಷೆಯಿದೆ. ಜತೆಗೆ ರಿಷಿ ನಾಯಕನಾಗಿರುವ, ನಂದೀಶ್ ನಿರ್ದೇಶಿಸುತ್ತಿರುವ ‘ರುದ್ರ ಗರುಡ ಪುರಾಣ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಭಾಗದ ಎರಡು ಶೆಡ್ಯುಲ್ ಶೂಟಿಂಗ್ ಪೂರ್ಣಗೊಂಡಿದೆ. ಹಬ್ಬದ ಸಮಯದಲ್ಲಿ ನನ್ನ ಕೈಗೆ ಪೆಟ್ಟು ಬಿದ್ದ ಕಾರಣ ಸದ್ಯ ಬ್ರೇಕ್ ಪಡೆದಿದ್ದೇನೆ. ಡಿಸೆಂಬರ್ ಮೊದಲ ವಾರದಿಂದ ಮೂರನೇ ಶೆಡ್ಯುಲ್ ಪ್ರಾರಂಭವಾಗಲಿದೆ.

  ಇದನ್ನೂ ಓದಿ : ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ ಪ್ರೊಫೆಸರ್​ ಮೇಘನಾ ; ‘ಛೂ ಮಂತರ್’, ‘ದ ಜಡ್ಜ್‌ಮೆಂಟ್’ ಚಿತ್ರಗಳಲ್ಲಿ ನಟನೆ

  5.9 ಅಡಿ ಕಟೌಟ್! ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ಚಿತ್ರರಂಗಕ್ಕೆ ಪ್ರಿಯಾಂಕಾ ಎಂಟ್ರಿ
  • 5.9 ಅಡಿ ಎತ್ತರವಿದ್ದೀರಿ. ನಟಿಯರು ಇಷ್ಟು ಹೈಟ್ ತುಂಬ ಅಪರೂಪ.
  • ತುಂಬ ಜನ ಈ ಹೈಟ್ ಇದ್ದರೆ ಬಾಲಿವುಡ್‌ಗೇ ಹೋಗಬೇಕು ಅಂತಾರೆ. ಆದರೆ, ನನಗೆ ಕನ್ನಡದಲ್ಲೇ ಸಿನಿಮಾ ಮಾಡಬೇಕು, ಇಲ್ಲೇ ಬೆಳೀಬೇಕು ಎಂಬಾಸೆ ಇದೆ. ನಂತರ ಬೇರೆ ಇಂಡಸ್ಟ್ರಿ ಬಗ್ಗೆ ಯೋಚಿಸುತ್ತೇನೆ. ಎತ್ತರ ಎಷ್ಟಿದ್ದಾರೆ ಎನ್ನುವ ಬದಲು, ಪ್ರತಿಭೆ ಗುರುತಿಸಿ ಅವಕಾಶ ನೀಡಬೇಕು.
  • ಮುಂದೆ?
  • ನಾನು ಸಿನಿಮಾಗಳಲ್ಲಿ ನಟಿಸಬೇಕು ಅಂತಲೇ ಬಂದವಳು. ಅದಕ್ಕೊಂದು ಪ್ರಾರಂಭ ಬೇಕಿತ್ತು. ಅದು ಧಾರಾವಾಹಿಗಳಲ್ಲಿ ದೊರೆಯಿತು. ಈಗ ಬಿಬಿಎಂ ಶಿಕ್ಷಣ ಪೂರ್ಣಗೊಳಿಸಿದ್ದೇನೆ. ಇನ್ನೇನಿದ್ದರೂ ಚಿತ್ರರಂಗದತ್ತ ಗಮನ ಹರಿಸುತ್ತೇನೆ. ದೊಡ್ಡ ಸ್ಟಾರ್ಸ್, ಡೈರೆಕ್ಟರ್ಸ್ ಜತೆ ಒಳ್ಳೊಳ್ಳೆ ಕಥೆಗಳು, ಪಾತ್ರಗಳಲ್ಲಿ ನಟಿಸಬೇಕು ಅಂತಾಸೆ ಇದೆ.
  5.9 ಅಡಿ ಕಟೌಟ್! ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ಚಿತ್ರರಂಗಕ್ಕೆ ಪ್ರಿಯಾಂಕಾ ಎಂಟ್ರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts