More

  ಶಾರುಖ್ ಖಾನ್​​ನ ಈ ಒಂದು ವಾಚ್ ಬೆಲೆಯಲ್ಲಿ ಐಷಾರಾಮಿ ಮನೆಯನ್ನೇ ಖರೀದಿಸಬಹುದು; ಅಷ್ಟು ದುಬಾರಿನಾ? ಅಂದ್ರು ಫ್ಯಾನ್ಸ್​​​

  ಮುಂಬೈ: ಬಾಲಿವುಡ್​​ ಬಾದ್ ಶಾ ಶಾರುಖ್ ಖಾನ್ ಬಿಟೌನ್ ಶ್ರೀಮಂತ ನಟರಲ್ಲಿ ಒಬ್ಬರು. ಬದಲಾಗುತ್ತಿರುವ ಫ್ಯಾಷನ್ ಜಗತ್ತಿನಲ್ಲಿ ಶಾರುಖ್ ತಮ್ಮ ಔಟ್​ಫಿಟ್​​ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನೆಟಿಜನ್‌ಗಳು ಅವರ ದುಬಾರಿ ವಾಚ್‌ಗಳು, ಕಾರುಗಳು ಮತ್ತು ಆಸ್ತಿಯಿಂದ ಹಿಡಿದು ಎಲ್ಲದರಲ್ಲೂ ಆಸಕ್ತಿ ತೋರಿಸುತ್ತಾರೆ. ಇದೀಗ ಫ್ಯಾನ್ಸ್​ ಕಣ್ಣು ಶಾರುಕ್​ ಅವರ ವಾಚ್​​ ಮೇಲೆ ಬಿದ್ದಿದೆ.

  ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ವಿಕಲಚೇತನರನ್ನು ಬೆಂಬಲಿಸುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಶಾರುಖ್ ಮುಖ್ಯ ಅತಿಥಿಯಾಗಿದ್ದರು. ಬಿಳಿ ಶರ್ಟ್, ನೀಲಿ ಬ್ಲೇಜರ್, ಬೂದು ಬಣ್ಣದ ಪ್ಯಾಂಟ್, ಶಾರುಖ್ ಅವರ ಸಿಗ್ನೇಚರ್ ಪೋನಿ ಹೇರ್‌ಸ್ಟೈಲ್‌ನಿಂದ ಸ್ಟೈಲ್ ಲುಕ್ ಅನ್ನು ಹೆಚ್ಚಿಸಿದೆ. ಮತ್ತು ಅದೇ ಸಮಾರಂಭದಲ್ಲಿ, ಅವರು ಪಾಟೆಕ್ ಫಿಲಿಪ್ ವಾಚ್ ಧರಿಸಿದ್ದರು. ಈ ವಾಚ್ ಬೆಲೆ ರೂ. 4.66 ಕೋಟಿ ಎಂದು ಮೂಲಗಳಿಮದ ತಿಳಿದು ಬಂದಿದೆ.

  ಮೊನ್ನೆಯಷ್ಟೇ ಶಾರುಖ್ ವಾಚ್ ಮತ್ತು ಕಾರ್ ಕಲೆಕ್ಷನ್ ಗಳ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಈ ದುಬಾರಿ ಬೆಲೆ ವಾಚ್​ ಮೇಲೆ ಅಭಿಮಾನಿಗಳ ಕಣ್ಣು ಬಿದ್ದಿದೆ. ಇಷ್ಟೊಂದು ದುಬಾರಿನಾ? ಎಂದು ಕಾಮೆಂಟ್​​ ಮಾಡುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಪ್ರಸ್ತುತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ಡಂಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ತಾಪ್ಸಿ ನಾಯಕಿಯಾಗಿ ನಟಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ಡಿಸೆಂಬರ್ 22 ರಂದು ಚಿತ್ರ ತೆರೆಗೆ ಬರಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts