ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದರಲ್ಲಿ ತಪ್ಪೇನಿದೆ? ಶ್ರುತಿ ಹಾಸನ್​ ಪ್ರಶ್ನೆ

Shruthi Haasan - Final
Published on

ತನ್ನ ವೈಯಕ್ತಿಕ ವಿಷಯಗಳನ್ನು ಬಹಿರಂಗಗೊಳಿಸುವುದರಲ್ಲಿ ಶ್ರುತಿ ಹಾಸನ್​ ಯಾವತ್ತೂ ಹಿಂದ ಬಿದ್ದಿಲ್ಲ. ಕುಡಿತದ ಚಟವಾಗಲೀ, ಬಾಯ್​ಫ್ರೆಂಡ್​ ಜತೆಗಿನ ಬ್ರೇಕ್​ಅಪ್​ ಆಗಲೀ ... ಅವೆಲ್ಲವನ್ನೂ ಅವರು ತಮ್ಮ ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

ಈಗ ಶ್ರುತಿ ತಾವು ಹಿಂದೊಮ್ಮೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ. ವೈಯಕ್ತಿಕವಾಗಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಇಷ್ಟವಿಲ್ಲದಿದ್ದರೂ, ಅನಿವಾರ್ಯವಾಗಿ ಅದಕ್ಕೆ ಮೊರೆಹೋಗಬೇಕಾಯಿತು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಹಿಂದೊಮ್ಮೆ ಕೆಲವರು ನನಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಸಲಹೆ ನೀಡಿದ್ದರು. ನಿನ್ನ ಮುಖ ಚೂಪಾಗಿದೆ, ನೀನು ವಿದೇಶಿಯಳ ತರಹ ಕಾಣುತ್ತೀಯ ಎಂದೆಲ್ಲಾ ಹೇಳಿದ್ದರು. ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದಕ್ಕೂ ಸಲಹೆ ನೀಡಿದ್ದರು. ಆದರೆ, ನನಗೆ ಅದು ಇಷ್ಟ ಇರಲಿಲ್ಲ. ಆದರೂ ನಾನು ಒಮ್ಮೆ ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋದೆ' ಎಂದು ಅವರು ಹೇಳಿಕೊಂಡಿದ್ದಾರೆ.

'ಆದರೂ ನಾನು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡೆ. ಅದಕ್ಕೆ ಕಾರಣ, ಒಮ್ಮೆ ನನ್ನ ಮೂಗು ಮುರಿದಿತ್ತು. ಅದು ಯಾಕೋ ಸರಿ ಎನ್ನುಸುತ್ತಿರಲಿಲ್ಲ. ಹಾಗಾಗಿ ಪ್ಲಾಸ್ಟಿಕ್​ ಸರ್ಜರಿ ಮೂಲಕ ಸರಿ ಮಾಡಿಸಿಕೊಂಡೆ' ಎಂದು ಅವರು ಹೇಳಿದ್ದಾರೆ.

ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡವರು, ಆ ಬಗ್ಗೆ ಹೇಳಿಕೊಳ್ಳುವುದಿಲ್ಲ. ಬಹಳಷ್ಟು ಜನ ಆ ವಿಷಯವನ್ನು ಮುಚ್ಚಿಡುತ್ತಾರಂತೆ. ಆದರೆ, ಶ್ರುತಿಗೆ ಅದು ಇಷ್ಟವಿಲ್ಲವಂತೆ. 'ಇಷ್ಟಕ್ಕೂ ಅದರಲ್ಲಿ ತಪ್ಪೇನಿದೆ. ಇದು ನನ್ನ ಮುಖ, ನನ್ನ ಜೀವನ. ನಾನ್ಯಾಕೆ ಆ ವಿಷಯವನ್ನು ಮುಚ್ಚಿಡಬೇಕು. ಹಾಗಂತ ನಾನು ಅದನ್ನು ಪ್ರಮೋಟ್​ ಮಾಡುತ್ತಿಲ್ಲ. ಅನಿವಾರ್ಯವಿದ್ದವರು ಬೇಕಾದರೆ ಮಾಡಿಸಿಕೊಳ್ಳಿ' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net