ನನ್ನನ್ನು ಕಂಡರೆ ತ್ರಿಷಾಗೆ ಭಯ ... ಮೀರಾ ಮಿಥುನ್​ ಹೀಗೆ ಹೇಳಿದ್ದು ಯಾಕೆ?

Meera - Trisha - Final
Published on

ಕಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವವರು ಎಂದರೆ ಅದು ಮೀರಾ ಮಿಥುನ್​. ತಮಿಳು ನಾಡು ತಮ್ಮನ್ನು ಬಾಯ್ಕಾಟ್​ ಮಾಡಿದರೂ, ತಾನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಮಾಡಲ್​ ಆಗಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಅಷ್ಟೇ ಅಲ್ಲ, ರಜನಿಕಾಂತ್​ ಮತ್ತು ವಿಜಯ್​ ಇಬ್ಬರೂ ತಮ್ಮ ಮಾನಹಾನಿ ಮಾಡುತ್ತಿದ್ದು, ಅದು ಹೀಗೆಯೇ ಮುಂದುವರೆದರೆ, ತಾನು ಅವರ ವಿರುದ್ಧ ಲೀಗಲ್​ ಆಕ್ಷನ್​ ತೆಗೆದುಕೊಳ್ಳುತ್ತೇನೆ ಎಂದು ಕೆಲವೇ ದಿನಗಳ ಹಿಂದೆ ಹೇಳಿಕೊಂಡು ಸುದ್ದಿಯಲ್ಲಿದ್ದರು.

ಇದೀಗ ಮೀರಾ ಮಿಥುನ್​ ಅವರ ಚಿತ್ತ, ನಟಿ ತ್ರಿಷಾ ಕೃಷ್ಣನ್​ ಅವರತ್ತ ನೆಟ್ಟಿದೆ. ತನಗೆ ಚಿತ್ರವೊಂದರಲ್ಲಿ ಸಿಕ್ಕ ಅವಕಾಶವನ್ನು ತಪ್ಪಿಸಿದ್ದೇ ತ್ರಿಷಾ ಎಂದು ಆರೋಪಿಸಿದ್ದಾರೆ. ತಾನು ಸೂಪರ್​ ಮಾಡಲ್​ ಆಗಿರುವ ಕಾರಣ, ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ನಾನೊಬ್ಬ ಕಿಂಗ್​ಫಿಶರ್​ ಸೂಪರ್​ ಮಾಡಲ್​. ನಾನು ಚಿತ್ರದಲ್ಲಿದ್ದರೆ, ಮಿಂಚುವುದಕ್ಕೆ ಕಷ್ಟ ಎಂಬ ಭಯ ಮತ್ತು ಅಭದ್ರತೆಯಿಂದ 'ಎನ್ನೈ ಅರಿಂದನಾಳ್​' ಚಿತ್ರದಿಂದ ಕಿತ್ತು ಹಾಕಿಸಿದರು. ನನ್ನ ವಿರುದ್ಧ ಕಾಲಿವುಡ್​ ಮಾಫಿಯಾ ಷಡ್ಯಂತ್ರ ಮಾಡಿತ್ತು. ಇದು ಮುಗಿದ ಮೇಲೂ, ತ್ರಿಷಾ ಸುಮ್ಮನಾಗಲಿಲ್ಲ. ರಜನಿಕಾಂತ್​ ಅಭಿನಯದ 'ಪೆಟ್ಟಾ' ಚಿತ್ರದಲ್ಲಿ ನಾನು ನಟಿಸಬೇಕಿತ್ತು. ತಮ್ಮ ಪವರ್​ ಉಪಯೋಗಿಸಿ ನನ್ನನ್ನು ಆ ಪಾತ್ರದಿಂದ ಕಿತ್ತು ಹಾಕಿಸಿದರು' ಎಂದು ಮೀರಾ ಮಿಥುನ್​ ಬರೆದುಕೊಂಡಿದ್ದಾರೆ.

ಮೀರಾ ಈ ರೀತಿ ಮಾತನಾಡುತ್ತಿರುವುದು ಮೊದಲೇನಲ್ಲ. 'ಬಿಗ್​ ಬಾಸ್​'ನ ಮೂರನೆಯ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದ ಈಕೆ, ಈ ಹಿಂದೆ ಕಮಲ್​ ಹಾಸನ್​, ತ್ರಿಷಾ ಮುಂತಾದವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈಗ ಅದೇ ಮೀರಾ, ಮತ್ತೊಮ್ಮೆ ತ್ರಿಷಾ ವಿರುದ್ಧ ತಿರುಗಿಬಿದ್ದಿದ್ದು, ಅಭದ್ರತೆಯಿಂದಾಗಿ ತನ್ನ್ನು ಚಿತ್ರದಿಂದ ಕಿತ್ತು ಹಾಕಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net