More

    ಮಾಜಿ ಮ್ಯಾನೇಜರ್​ ದಿಶಾ ಆತ್ಮಹತ್ಯೆ ಬೆನ್ನಲ್ಲೇ ಪದೇಪದೆ ಗೂಗಲ್​ ನೋಡ್ತಿದ್ರಂತೆ ಸುಶಾಂತ್​?!

    ಮುಂಬೈ: ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡು ಹಲವು ವಾರಗಳೇ ಕಳೆದರೂ, ಅವರ ಸಾವಿಗೆ ನಿಖರ ಕಾರಣ ಇನ್ನು ತಿಳಿದಿಲ್ಲ. ಇದರ ನಡುವೆ ವಿವಿಧ ಆಯಾಮಗಳಿಂದ ತನಿಖೆ ನಡೆಯುತ್ತಿದ್ದು, ಹಲವರ ವಿಚಾರಣೆಯೂ ಮುಗಿದಿದೆ. ಇದರ ಮಧ್ಯೆ ಫ್ಯಾಮಿಲಿ ಲಾಯರ್,​ ಸುಶಾಂತ್ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಬಗ್ಗೆ ಮಾತನಾಡಿರುವುದು ಕುತೂಹಲ ಮೂಡಿಸಿದೆ.

    ಅಂದಹಾಗೆ ಸುಶಾಂತ್​ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲ ದಿನಗಳ ಹಿಂದೆ ದಿಶಾ ಕಟ್ಟದಿಂದ ಜಿಗಿದು ಪ್ರಾಣ ಬಿಟ್ಟಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಆದರೆ, ಕೌಟುಂಬಿಕ ಕಲಹದಿಂದ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

    ಇದನ್ನೂ ಓದಿ: ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಗರ್ಭಿಣಿಯಾಗಿದ್ರಾ? ಇದೇ ವಿಚಾರಕ್ಕೆ ನಡೆದಿತ್ತಾ ಜಗಳ?

    ಈ ಬಗ್ಗೆ ಮಾತನಾಡಿರುವ ಸುಶಾಂತ್​ ಫ್ಯಾಮಿಲಿ ಲಾಯರ್​, ಸುಶಾಂತ್​ ತನ್ನ ಇಮೇಜ್ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತಿದ್ದರು. ಎಲ್ಲ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಅದರಲ್ಲೂ ದಿಶಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ದಿಶಾ ಸಾವಿನ ಜತೆಗೆ ತನ್ನ ಹೆಸರು ತಪ್ಪಾಗಿ ತಳುಕು ಹಾಕಿಕೊಳ್ಳಬಾರದು ಹಾಗೂ ವದಂತಿಗಳು ಹರಡಬಾರದು ಎಂಬ ಕಾರಣಕ್ಕೆ ನಿರಂತರವಾಗಿ ಗೂಗಲ್​ ಪರಿಶೀಲಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ದಿಶಾಳನ್ನು ನೇಮಕ ಮಾಡಿದ್ದು ಸುಶಾಂತ್​ ಅಲ್ಲ, ಗರ್ಲ್​ಫ್ರೆಂಡ್​ ರಿಯಾ ಚಕ್ರವರ್ತಿ ಎಂದು ತಿಳಿಸಿದ್ದಾರೆ.

    ಆದಾಗ್ಯೂ ದಿಶಾ ಕುರಿತು ವದಂತಿಯೊಂದ ಹರಿದಾಡಿತ್ತು. ದಿಶಾ, ಈ ಮುಂಚೆ ಗರ್ಭಿಣಿಯಾಗಿದ್ದರು. ಅದಕ್ಕೆ ಕಾರಣ ನಟ ಸೂರಜ್​ ಪಾಂಚೋಲಿ. ಹೀಗಾಗಿ ಇದೇ ವಿಚಾರವಾಗಿ ಬಹು ವರ್ಷಗಳಿಂದ ಸುಶಾಂತ್​ ಮತ್ತು ಸೂರಜ್​ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ಸೂರಜ್​ ಬೆನ್ನಿಗೆ ನಟ ಸಲ್ಮಾನ್​ ಖಾನ್ ನಿಂತಿದ್ದರು ಎಂಬ ವದಂತಿ ಬಾಲಿವುಡ್​ ಗಲ್ಲಿಯಲ್ಲಿ ಹರಿದಾಡಿತ್ತು.

    ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದ ಸೂರಜ್​, ಸುಶಾಂತ್​ರೊಂಗಿಗೆ ಯಾವಾಗ ಗಲಾಟೆ ನಡೆದಿತ್ತು? ನಾನು ಎಂದಿಗೂ ಅವರೊಂದಿಗೆ ವಾಗ್ವಾದ ಮಾಡಿಯೇ ಇಲ್ಲ. ಈ ಮುಂಚೆಯೂ ನಾನಿದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಇನ್ನು ಸಲ್ಮಾನ್​ ಖಾನ್​ ಅವರು ನನ್ನ ಜೀವನದಲ್ಲೇಕೆ ಮಧ್ಯಸ್ಥಿಕೆ ವಹಿಸಬೇಕು? ಅವರಿಗೆ ಮಾಡಲು ಬೇರೆ ಕೆಲಸವಿಲ್ಲವೇ? ನಿಜ ಹೇಳಬೇಕೆಂದರೆ ದಿಶಾ ಯಾರೆಂದು ನನಗೆ ಗೊತ್ತೇ ಇಲ್ಲ. ನನ್ನ ಜೀವನದಲ್ಲಿ ನಾನೆಂದು ಅವರನ್ನು ಭೇಟಿ ಮಾಡಿಯೇ ಇಲ್ಲ ಎಂದು ವಂದತಿಗೆ ತೆರೆ ಎಳೆದಿದ್ದರು.

    ಇದನ್ನೂ ಓದಿ: ಒಂಬತ್ತನೇ ಗಂಡನಿಂದ ಕೊಲೆಯಾದ ಮಹಿಳೆಯ ಹಿನ್ನೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ!

    ಅಂದಹಾಗೆ ಫ್ಯಾಮಿಲಿ ಲಾಯರ್​, ಸುಶಾಂತ್​ ಗರ್ಲ್​​ಫ್ರೆಂಟ್​ ರಿಯಾ ಚಕ್ರವರ್ತಿಯ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೇರೆಯವರನ್ನು ಬಂಧಿಸುವ ಅಗತ್ಯವಿಲ್ಲ. ರಿಯಾ ಬಂಧಿಸಿ. ಆಕೆಯೇ ಸುಶಾಂತ್​ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಇನ್ನು ಹೆಚ್ಚಿಗೆ ತಿಳಿಯಲು ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ…(ಏಜೆನ್ಸೀಸ್​)

    ರಿಯಾ ಕಂಟ್ರೋಲ್​ನಲ್ಲಿ ಸುಶಾಂತ್, 15 ಕೋಟಿ ರೂ. ರಹಸ್ಯ ಜತೆಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಫ್ಯಾಮಿಲಿ ಲಾಯರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts