More

    ಸುಶಾಂತ್ ಬ್ಯಾಂಕ್ ಖಾತೆಯಲ್ಲಿದ್ದ ೧೫ ಕೋಟಿ ರೂಪಾಯಿ ಎಲ್ಲಿ ಹೋಯ್ತು?

    ಮುಂಬೈ: ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಕುರಿತು ವಿವಿಧ ಆಯಾಮಗಳಿಂದ ತನಿಖೆ ನಡೆಯುತ್ತಿರುವ ನಡುವೆಯೇ ಸುಶಾಂತ್​ ಅವರ ಫ್ಯಾಮಿಲಿ ಲಾಯರ್​ ಗರ್ಲ್​ಫ್ರೆಂಡ್ ರಿಯಾ ಚಕ್ರವರ್ತಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

    ಸುಶಾಂತ್​ ತಂದೆ ನಿನ್ನೆಯಷ್ಟೇ ಪಟನಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ. ಸಲ್ಲಿಸಿರುವ ಎಫ್​ಐಆರ್​ ಮಾಹಿತಿಯಲ್ಲೂ ರಿಯಾ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂಬುದು ಸೇರಿ ಸಾಕಷ್ಟು ಆರೋಪಗಳನ್ನು ಮಾಡಲಾಗಿದೆ.

    ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡ: ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿ ಕೊಂದ ಪತ್ನಿ!

    ಮಾಧ್ಯಮವೊಂದರಲ್ಲಿ ಮಾತನಾಡಿರುವ ಫ್ಯಾಮಿಲಿ ಲಾಯರ್​, ಮುಂಬೈ ಪೊಲೀಸರು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಬಾಂದ್ರಾ ಡಿಸಿಪಿಗೆ ಸುಶಾಂತ್ ಸ್ನೇಹಿತರ ಮೇಲೆ ಕಣ್ಣಿಡಿ ಎಂದು ನಾನು ಮನವಿ ಮಾಡಿದ್ದೆ ಎಂದು ತಿಳಿಸಿದ ಲಾಯರ್​, ರಿಯಾ ವಿರುದ್ಧ ಮಾತನಾಡಿ, ಸುಶಾಂತ್​ ಆತ್ಮಹತ್ಯೆಯಲ್ಲಿ ರಿಯಾ ಪಾತ್ರವಿದೆ. ಆತನೊಂದಿಗೆ ಇದ್ದಾಗ ಮಾನಸಿಕ ಸ್ಥಿತಿ ಹದಗೆಡಲು ಅವಳೇ ಕಾರಣ. ಅಲ್ಲದೆ, ಮನಶ್ಶಾಸ್ತ್ರಜ್ಞರು ಮತ್ತು ಔಷಧಿಗಳನ್ನು ಆಕೆಯೇ ಆಯ್ಕೆ ಮಾಡುತ್ತಿದ್ದಳು. ಸುಶಾಂತ್​ ಖಾತೆಯಿಂದ 15 ಕೋಟಿ ರೂ. ಹಣವನ್ನು ನಿಗೂಢವಾಗಿ ಎಗರಿಸಿದ್ದಳು ಎಂದು ಆರೋಪಿಸಿದ್ದಾರೆ.

    ಸುಶಾಂತ್​ನನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಳು. ತಂದೆಯನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಅನೇಕ ಸಂದರ್ಭದಲ್ಲಿ ತನ್ನ ಮಗನನ್ನು ನೋಡಲು ಸುಶಾಂತ್​ ತಂದೆ ಪ್ರಯತ್ನಿಸಿದ್ದಾರೆ. ಆದರೆ, ರಿಯಾ ಬಾಡಿಗಾರ್ಡ್​ ಮೂಲಕ ಅವರನ್ನು ತಡೆಯುತ್ತಿದ್ದಳು. ಒಂದು ವೇಳೆ ಆತ ಕುಟುಂಬದಿಂದ ದೂರ ಉಳಿಯದೇ ಇದ್ದಿದ್ದರೆ, ಇಂದು ಸುಶಾಂತ್​ಗೆ ಈ ಗತಿ ಬರುತ್ತಿರಲಿಲ್ಲ. ಅನೇಕ ದಿನಗಳವರೆಗೆ ಸಂಚು ರೂಪಿಸಿ, ತಮ್ಮ ಕಾರ್ಯಯೋಜನೆಯನ್ನು ಸಂಪೂರ್ಣಗೊಳಿಸಿದ್ದಾರೆ. ಇದು ಕೊಲೆಯಲ್ಲ. ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆಪಾದನೆ ಮಾಡಿದರು.

    ಇದನ್ನೂ ಓದಿ: ರಿಯಲ್​ ಎಸ್ಟೇಟ್​ ಹಗರಣದಲ್ಲಿ ನಯನತಾರಾ, ರಮ್ಯಾ ಕೃಷ್ಣನ್​, ಅಂಜಲಿ ತೆಂಡೂಲ್ಕರ್​ ಹೆಸರು: ಕೋಟಿಗಟ್ಟಲೇ ಹಣ ವಂಚನೆ!

    ಪಟನಾ ಪೊಲೀಸರು ಈವರೆಗೂ ರಿಯಾ ಬಂಧಿಸುವ ಪ್ರಯತ್ನ ಮಾಡಿಲ್ಲ. ಆದರೆ, ಅವರು ಬಂಧಿಸುತ್ತಾರೆಂಬ ಭರವಸೆ ಇದೆ. ಪ್ರಕರಣದಲ್ಲಿ ಬೇರೆಯವರನ್ನು ಬಂಧಿಸುವ ಅಗತ್ಯವಿಲ್ಲ. ರಿಯಾನೇ ಪ್ರಕರಣದ ಕೇಂದ್ರ ಬಿಂದುವಾಗಿದ್ದಾಳೆ. ಸೆಕ್ಷನ್​ 306ರ ಅಡಿಯಲ್ಲಿ ಆಕೆಗೆ 10 ವರ್ಷದ ಶಿಕ್ಷೆಗೆ ಗುರಿಪಡಿಸಬೇಕು. ಎಫ್​ಐಆರ್​ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಕಸ್ಟಡಿಯಲ್​ ವಿಚಾರಣೆ ನಡೆದರೆ ಅವಳನ್ನು ಬಂಧಿಸಲೇಬೇಕಾಗುತ್ತದೆ ಎಂದಿದ್ದಾರೆ.

    ಸುಶಾಂತ್​ನನ್ನು ರಿಯಾ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದಳು. ಇದೇ ಆತನ ಮಾನಸಿಕ ಸಮಸ್ಯೆಗೆ ಕಾರಣವಾಗಿತ್ತು. ಅಲ್ಲದೆ, ಆತನಿಗೆ ನೀಡುವ ಔಷಧಿ ಮೇಲೂ ಅವಳ ಪ್ರಭಾವ ಇತ್ತು. ಬಹುಶಃ ಇದೆಲ್ಲ ಅವಳು ರೂಪಿಸಿದ ಸಂಚಿನ ಭಾಗವಾಗಿತ್ತು ಎನ್ನಲಾಗಿದೆ. ತನಿಖೆ ನಡೆದರೆ ಇದೆಲ್ಲ ಸ್ಪಷ್ಟವಾಗಬಹುದು. ಸುಶಾಂತ್​ ತೆಗೆದುಕೊಳ್ಳುತ್ತಿದ್ದ ಔಷಧಿ, ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಹಾಗೂ ಬದಲಾದ ವೈದ್ಯರು ಇದೆಲ್ಲ ತನಿಖೆಯಲ್ಲಿ ತಿಳಿದುಬರಲಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಗೂಗಲ್ ಪೇ ಗ್ರಾಹಕರೇ ಹುಷಾರ್: ಸಮಸ್ಯೆ ಎಂದು ಕಸ್ಟಮರ್ ಕೇರ್ ಮೊರೆ ಹೋದವನಿಗೆ ಕಾದಿತ್ತು ಶಾಕ್!

    ಸುಶಾಂತ್​ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ, ದೂರು ದಾಖಲಿಸಿದ ರಜಪೂತ್​ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts