More

    ಭೀಕರ ರಸ್ತೆ ಅಪಘಾತ, ನಟ ಸುಶಾಂತ್​ ಸಿಂಗ್​ ರಜಪೂತ್​ ಕುಟುಂಬದ ಐವರ ದಾರುಣ ಸಾವು

    ಬಿಹಾರ: ಲಖಿಸರೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

    ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸೋದರ ಮಾವ ಒಪಿ ಸಿಂಗ್​ ಅವರ ಪತ್ನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ವೇಳೆ, ಬಿಹಾರದ ಲಖಿಸರೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್​ ಮಧ್ಯೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ 10 ಜನರಲ್ಲಿ ಕಾರು ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ದುರ್ಘಟನೆಯಲ್ಲಿ 4 ಮಂದಿ ತೀವ್ರ ಗಾಯಗೊಂಡಿದ್ದು, ಅವರನ್ನು ಪಟನಾ ಮತ್ತು ಲಖಿಸರೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಸುಶಾಂತ್​ ಸಿಂಗ್​ ಕುಟುಂಬದ ಲಾಲ್ಜಿತ್​ ಸಿಂಗ್​ ಅವರ ಮಕ್ಕಳಾದ ನೇಮಾನಿ ಸಿಂಗ್​, ರಾಮಚಂದ್ರ ಸಿಂಗ್​ ಮತ್ತು ಬೇಬಿದೇವಿ, ಅನಿತಾದೇವಿ ಮತ್ತು ಕಾರು ಚಾಲಕ ಪ್ರೀತಂಕುಮಾರ್​ ಎಂದು ಗುರುತಿಸಲಾಗಿದೆ.

    ವಿವಾದದ ಸುಳಿಯಲ್ಲಿ ನಾದಬ್ರಹ್ಮ ಹಂಸಲೇಖ: ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ… ಇದೆಂಥಾ ಮಾತು ಹೇಳಿಬಿಟ್ರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts