More

    ವಿವಾದದ ಸುಳಿಯಲ್ಲಿ ನಾದಬ್ರಹ್ಮ ಹಂಸಲೇಖ: ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ… ಇದೆಂಥಾ ಮಾತು ಹೇಳಿಬಿಟ್ರಿ?

    ಬೆಂಗಳೂರು: ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ವಿವಾದ ಸೃಷ್ಟಿಸಿದೆ. ದಲಿತರನ್ನು ಒಳಗೊಳ್ಳುವಿಕೆ ಕುರಿತು ಉಡುಪಿ ಪೇಜಾವರ ಮಠದ ಸ್ವಾಮೀಜಿ ನಡೆಸಿದ ಪಾದಯಾತ್ರೆಗಳು, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ನಡೆಸಿದ ಗ್ರಾಮ ವಾಸ್ತವ್ಯ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಕುರಿತು ಹಂಸಲೇಖ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

    ಪೇಜಾವರ ಸ್ವಾಮಿಗಳು ದಲಿತ ಮನೆಯಲ್ಲಿ ಇದ್ದು ಬಂದಿದ್ದರು ಎಂದು ಇತ್ತೀಚೆಗೆ ನೋಡಿದೆ. ಅವರು ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನೋಕಾಗುತ್ತ? ಕೋಳಿ ಬೇಡ, ಕುರಿಯ ರಕ್ತ ಫ್ರೈ ಮಾಡಿ ಕೊಟ್ಟರೆ, ಲಿವರ್​ ಕೊಟ್ಟರೆ ತಿನ್ನುತ್ತಾರಾ ಇವರು? ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಚಾರ? ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಶುರು ಮಾಡಿದರು. ಅದು ಗೀಳಾಗಿ ಅಶೋಕ್​, ಅಶ್ವತ್ಥನಾರಾಯಣ ಅದನ್ನೇ ಮಾಡುತ್ತಿದ್ದಾರೆ. ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನ ಜತೆ ಇರುತ್ತಾನೆ, ಬೆಳಗಾಗುವ ಹೊತ್ತಿಗೆ ವಾಪಸ್​ ಬಂದು ಕಲ್ಲಾಗುತ್ತಾನೆ ಎನ್ನಲಾಗುತ್ತದೆ. ಅದರಲ್ಲಿ ಏನು ದೊಡ್ಡ ವಿಚಾರ? ದಲಿತರನ್ನು ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಆಕೆಯನ್ನು ಕೂರಿಸಿದ್ದರೆ ಅದು ದೊಡ್ಡ ವಿಚಾರ. ಇದೊಂದು ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಬರಬೇಕು, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ನಮ್ಮ ಮನೆಯ ಲೋಟವನ್ನು ನೀನು ಮುಟ್ಟು, ಅದನ್ನು ನಾವು ತೊಳೆಯುತ್ತೇವೆ ಎನ್ನಬೇಕು. ಈಗ ಭಾರತದಲ್ಲಿ ಇದೊಂದು ಬೂಟಾಟಿಕೆ ನಡೆಯುತ್ತಿದೆ ಎಂದು ಹಂಸಲೇಖ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹಂಸಲೇಖ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಆಹಾರ ಸೇವನೆ ಅವರವರ ಸ್ವಾತಂತ್ರ್ಯವಾಗಿದ್ದು, ಮಾಂಸಾಹಾರ ಸೇವಿಸಬೇಕು ಎನ್ನುವುದು ಸರಿಯಲ್ಲ ಎಂದಿದ್ದಾರೆ.

    ಬಿಳಿಗಿರಿರಂಗನಾಥನ ಭಕ್ತರು, ಪೇಜಾವರ ಶ್ರೀಗಳ ಶಿಷ್ಯವೃಂದ, ಸಾಮಾಜಿಕ ಕಾರ್ಯಕರ್ತರು ಹಾಗೂ ಅಖಿಲ ಕರ್ನಾಟಕ ಮಾಧ್ವ ಮಹಾ ಸಭಾ ಹೆಸರಿನಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ. ಬಿಳಿಗಿರಿ ರಂಗನಾಥನ ಮಹಿಮೆಯನ್ನು ಬೂಟಾಟಿಕೆ ಅಂತ ಅವಹೇಳನ ಮಾಡಿದ್ದು ಬಿಳಿಗಿರಿರಂಗನಾಥನ ಭಕ್ತರಿಗೆ ಬಹಳ ನೋವುಂಟುಮಾಡಿದೆ. ಯಾರನ್ನೋ ಮೆಚ್ಚಿಸಲೋಸುಗ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಈ ರೀತಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ ಸಮಾಜದಲ್ಲಿ ಸಾಮರಸ್ಯ ಉಳಿವುದೆ? ಇದು ಅವರ ವ್ಯಕ್ತಿತ್ವಕ್ಕೆ ಶೋಭೇಯೇ? ಪದ್ಮವಿಭೂಷಣ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಿಂದೂ ಸಮಾಜದ ಏಕತೆಗಾಗಿ ಹಿಂದವಃ ಸೋದರಾಃ ಸರ್ವೆ, ನ ಹಿಂದೂ ಪತಿತೋ ಭವೇತ್​ ಎಂಬ ಸಂದೇಶ ಕೊಟ್ಟು ದಲಿತರನ್ನು ಅಸ್ಪೃಶ್ಯ ಎಂದು ದೂರ ಇಡುವುದು ಸರಿಯಲ್ಲ ಎಂದು ಸಂದೇಶ ನೀಡಿದರು. ಹಂಸಲೇಖರ ಹೇಳಿಕೆಯಿಂದ ಹಿಂದೂ ಸಮಜಕ್ಕೆ ನೋವುಂಟಾಗಿದೆ. ಹಂಸಲೇಖ ಅವರು ಬಹಿರಂಗವಾಗಿ ಕ್ಷೆಮೆಯಾಚಿಸಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

    ವಿವಾದದ ಸುಳಿಯಲ್ಲಿ ನಾದಬ್ರಹ್ಮ: ಕ್ಷಮಿಸಿ.. ನನ್ನ ಹೆಂಡ್ತಿ ಬಳಿಯೂ ಕ್ಷಮೆ ಕೇಳಿದ್ದೀನಿ.. ಎಂದು ಕೈಮುಗಿದ ಹಂಸಲೇಖ

    ಬಸ್ ಮೇಲಿದ್ದ ಅಪ್ಪು ಫೋಟೋಗೆ ಮುತ್ತಿಟ್ಟು, ಸೆರಗಿನಿಂದ ಮುಖ ಸವರಿ ಕಣ್ಣೀರಿಟ್ಟ ಅಜ್ಜಿ! ಮನಮಿಡಿಯೋ ದೃಶ್ಯ ವೈರಲ್

    ತಡರಾತ್ರಿ ಕೋಳಾಲಮ್ಮ ದೇಗುಲದ ಶ್ರೀಧರಮ್ಮ ಮತ್ತು ಅರ್ಚಕ ನಿಗೂಢ ಸಾವು! ಸಾವಿನ ಸುತ್ತ ಅನುಮಾನದ ಹುತ್ತ

    ಭಾವಿ ಪತಿಯ ಹಿಂಸೆ ಸಹಿಸಲಾಗದೆ ಯುವತಿ ಆತ್ಮಹತ್ಯೆ: ಪ್ರೀ ವೆಡ್ಡಿಂಗ್​ ಫೋಟೋ ಶೂಟಿಂಗ್​ ವೇಳೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts