ಬಸ್ ಮೇಲಿದ್ದ ಅಪ್ಪು ಫೋಟೋಗೆ ಮುತ್ತಿಟ್ಟು, ಸೆರಗಿನಿಂದ ಮುಖ ಸವರಿ ಕಣ್ಣೀರಿಟ್ಟ ಅಜ್ಜಿ! ಮನಮಿಡಿಯೋ ದೃಶ್ಯ ವೈರಲ್

1189131
Published on

ಕೊಪ್ಪಳ: ಸಾರಿಗೆ ಬಸ್ ಮೇಲಿದ್ದ ಪುನೀತ್ ರಾಜ್​ಕುಮಾರ್​ ಫೋಟೊಕ್ಕೆ ಅಜ್ಜಿಯೊಬ್ಬರು ಮುತ್ತಿಟ್ಟು, ಸೆರಗಿನಿಂದ ಅಪ್ಪು ಮುಖ ಸವರಿದ ವಿಡಿಯೋ ಸಖತ್​ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಮೇಲಿನ ಜಾಹೀರಾತುವೊಂದರಲ್ಲಿ ಪುನೀತ್ ರಾಜ್​ಕುಮಾರ್​ರ ಫೋಟೋ ಇದೆ. ಬಸ್​ ಮೇಲೆ ಅಪ್ಪು ಫೋಟೋ ನೋಡಿ ಭಾವುಕರಾದ ಅಜ್ಜಿ, ಆ ಫೋಟೋಗೆ ಮುತ್ತಿಟ್ಟು, ಅದರ ಮೇಲೆ ಕೆಲಹೊತ್ತು ತನ್ನ ತಲೆ ಇಟ್ಟು ನಮಿಸಿದ್ದಾರೆ. ಬಳಿಕ ಅಪ್ಪು ಫೋಟೋ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ದೂರದಿಂದಲೇ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಜ್ಜಿ ನೊಂದುಕೊಂಡು‌ ಅಪ್ಪು ಫೋಟೋವನ್ನು ಸೆರಗಿನಿಂದ ಸ್ವಚ್ಛ ಮಾಡಿದ ದೃಶ್ಯ ನೋಡಿದ್ರೆ ಮನಕಲಕುತ್ತೆ, ಹೃದಯ ತುಂಬಾ ಭಾರ ಅನ್ನಿಸುತ್ತೆ... ಈ ಪ್ರೀತಿ, ಅಭಿಮಾನವನ್ನ ವರ್ಣಿಸೋಕೆ ಪದಗಳೇ ಇಲ್ಲ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net