ಹ್ಯಾರಿ ಬ್ರೂಕ್ ಬಿರುಸಿನ ಆಟ :ಇಂಗ್ಲೆಂಡ್ ಸೂಪರ್-8 ಹಂತಕ್ಕೇರಲು ನೆರವಾದ ಸಾಂಪ್ರದಾಯಿಕ ಎದುರಾಳಿ!

1 Min Read
ಹ್ಯಾರಿ ಬ್ರೂಕ್ ಬಿರುಸಿನ ಆಟ :ಇಂಗ್ಲೆಂಡ್ ಸೂಪರ್-8 ಹಂತಕ್ಕೇರಲು ನೆರವಾದ ಸಾಂಪ್ರದಾಯಿಕ ಎದುರಾಳಿ!

ನಾರ್ತ್‌ಸೌಂಡ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ಟಿ20 ವಿಶ್ವಕಪ್‌ನ ‘ಮಾಡು ಇಲ್ಲಗೆ ಮಡಿ’ ಪಂದ್ಯದಲ್ಲಿ ನಮೀಬಿಯಾ ಎದುರು ಡಕ್ವರ್ತ್ ಲೂಯಿಸ್ ಸ್ಟರ್ನ್ ನಿಯಮ ಪ್ರಕಾರ 41 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಎದುರು ಸ್ಕಾಟ್ಲೆಂಡ್ ತಂಡ ಸೋಲು ಅನುಭವಿಸಿದ್ದರಿಂದ ರನ್‌ರೇಟ್‌ನಲ್ಲಿ ಸ್ಕಾಟ್ಲೆಂಡ್‌ಗಿಂತ ಮೇಲುಗೈ ಸಾಧಿಸಿದ ಇಂಗ್ಲೆಂಡ್ ತಂಡ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯವನ್ನು ತಲಾ 11 ಓವರ್‌ಗೆ ಇಳಿಸಲಾಯಿತು. ನಿಗದಿತ ಸಮಯಕ್ಕಿಂತ 3 ಗಂಟೆ ತಡವಾಗಿ ಆರಂಭಗೊಂಡ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, 13 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜಾನಿ ಬೇರ್‌ಸ್ಟೋ (31) ಹಾಗೂ ಹ್ಯಾರಿ ಬ್ರೂಕ್ (47 ರನ್*, 20 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಜತೆಯಾಟದ ನೆರವಿನಿಂದ 8 ಓವರ್‌ಗಳಲ್ಲಿ 82 ರನ್‌ಗಳಿಸಿದಾಗ ಮತ್ತೆ 1 ಓವರ್ ಕಡಿತಗೊಳಿಸಲಾಯಿತು. ಅಂತಿಮವಾಗಿ 10 ಓವರ್‌ಗಳಲ್ಲಿ 5 ವಿಕೆಟ್‌ಗೆ 122 ರನ್ ಪೇರಿಸಿತು. ಡಿಎಲ್‌ಎಸ್ ನಿಯಮದನ್ವಯ 126 ರನ್ ಗುರಿ ಬೆನ್ನಟ್ಟಿದ ನಮೀಬಿಯಾ, 10 ಓವರ್‌ಗಳಲ್ಲಿ 3 ವಿಕೆಟ್‌ಗೆ 84 ರನ್‌ಗಳಿಸಲಷ್ಟೇ ಶಕ್ತವಾಯಿತು.

ಇಂಗ್ಲೆಂಡ್: 10 ಓವರ್‌ಗಳಲ್ಲಿ 5 ವಿಕೆಟ್‌ಗೆ 122 (ಫಿಲ್ ಸಾಲ್ಟ್ 11, ಬೇರ್ ಸ್ಟೋ 31, ಹ್ಯಾರಿ ಬ್ರೂಕ್ 47*, ಮೊಯಿನ್ ಅಲಿ 16, ಲಿವಿಂಗ್‌ಸ್ಟೋನ್ 13, ರುಬೆನ್ ಟ್ರುಪ್ಲೆಮನ್ 31ಕ್ಕೆ 2, ಡೇವಿಡ್ ವೈಸ್ 6ಕ್ಕೆ 1).
ನಮೀಬಿಯಾ: 10 ಓವರ್‌ಗಳಲ್ಲಿ 3 ವಿಕೆಟ್‌ಗೆ 84 (ಮೈಕೆಲ್ ಲಿಂಗೆನ್ 33, ನಿಕೋಲಸ್ 18, ವೈಸ್ 27, ಎರಾಸ್ಮಸ್ 1, ಆರ್ಚರ್ 15ಕ್ಕೆ 1, ಜೋರ್ಡಾನ್ 19ಕ್ಕೆ 1). ಪಂದ್ಯಶ್ರೇಷ್ಠ: ಹ್ಯಾರಿ ಬ್ರೂಕ್.

See also  ಜಿಪಂ ಹಂತದಿಂದ ತೇರ್ಗಡೆಯಾಗದ ಸಚಿವ-ಮಂಕಾಳ ವೈದ್ಯ ಬಗ್ಗೆ ಬಿಜೆಪಿ ಟೀಕೆ

5: ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಅ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ 5 ತಂಡಗಳು ಅಜೇಯವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿವೆ.

Share This Article