ರಿಯಾನಂಥವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ; ವಂಚಿಸುವುದೇ ಅವರ ಕೆಲಸ; ಸಿದ್ಧೀಕಿ ಸಹೋದರ

a
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಮಂದಿಯನ್ನು ಮುಂಬೈ ಪೊಲಿಸ್​ ವಿಚಾರಣೆ ನಡೆಸುತ್ತಿದೆ. ಇತ್ತ ನಿನ್ನೆಯಷ್ಟೇ ಹೊಸದಾಗಿ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಕೇಸ್​ ಕೂಡ ದಾಖಲಾಗಿದೆ. ಸುಶಾಂತ್​ ಆತ್ಮಹತ್ಯೆಗೆ ರಿಯಾಳೇ ಪರೋಕ್ಷ ಕಾರಣವೆಂದು ಆಪಾದನೆ ಮಾಡಿ ದೂರು ನೀಡಲಾಗಿದೆ. ಸೋಷಿಯಲ್​ ಮೀಡಿಯಾದಲ್ಲೂ ಈ ವಿಚಾರ ಬಹು ಚರ್ಚೆಯಾಗುತ್ತಿದ್ದು, ತನಿಖೆಗೆ ಆದೇಶಿಸಲಾಗಿದೆ.

ಈ ನಡುವೆ ನವಾಜುದ್ದೀನ್​ ಸಿದ್ಧೀಕಿ ಸಹೋದರ ಶಮಸ್​ ನವಾಬ್​ ಸಿದ್ಧೀಕಿ ಸಹ ರಿಯಾ ವಿರುದ್ಧ ಬ್ಯಾಟ್ ಬೀಸಿದ್ದಾರೆ. ಟ್ವಿಟರ್​ನಲ್ಲಿ ರಿಯಾ ವಿರುದ್ಧ ಖಡಕ್​ ಮಾತುಗಳಿಂದಲೇ ತರಾಟೆ ತೆಗೆದುಕೊಂಡಿದ್ದಾರೆ.

‘ನಮ್ಮ ನಡುವೆ ರಿಯಾ ಚಕ್ರವರ್ತಿ ರೀತಿಯ ಜನರೇ ಹೆಚ್ಚಿದ್ದಾರೆ. ಅವರ ಕೆಲಸವೇ ಬ್ಲಾಕ್​ಮೇಲ್​ ಮಾಡುವುದು. ಬೇರೊಬ್ಬರ ಶ್ರಮ ಮತ್ತು ಘನತೆಯ ಮೇಲೆ ನೀರು ಸುರಿಯುತ್ತಾರೆ. ಹಣ ಸೇರಿ ಎಲ್ಲವನ್ನು ದೋಚುತ್ತಾರೆ’ ಎಂದು ರಿಯಾ ವಿರುದ್ಧ ಹರಿಹಾಯ್ದಿದ್ದಾರೆ.

ಅಂದಹಾಗೆ, ಸುಶಾಂತ್​ ಸಾವಿನ ಹಿನ್ನೆಲೆ ತಿಳಿಯಲು ಈಗಾಗಲೇ ಪಾಟ್ನಾದಲ್ಲಿ ರಿಯಾ ಮೇಲೆ ಪ್ರಕರಣ ದಾಖಲಾಗಿದ್ದು, ಆತನೊಂದಿಗೆ ಇದ್ದಾಗ ಮಾನಸಿಕ ಸ್ಥಿತಿ ಹದಗೆಡಲು ಅವಳೇ ಕಾರಣ. ಅಲ್ಲದೆ, ಮನಶಾಸ್ತ್ರಜ್ಞರು ಮತ್ತು ಔಷಧಿಗಳನ್ನು ಆಕೆಯೇ ಆಯ್ಕೆ ಮಾಡುತ್ತಿದ್ದಳು. ಸುಶಾಂತ್​ ಖಾತೆಯಿಂದ 15 ಕೋಟಿ ರೂ. ಹಣವನ್ನು ನಿಗೂಢವಾಗಿ ಎಗರಿಸಿದ್ದಳು ಎಂಬ ಆರೋಪಗಳೂ ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net