ಜೊತೆಗೆ, 'ತಪ್ಪುಗಳು ಮಾಡುವುದು' ಸಹಜ ಎಂಬಂತೆ ತಮ್ಮ ಪೋಸ್ಟ್ಗೆ ಕ್ಯಾಪ್ಷನ್ ನೀಡಿದ್ದಾರೆ. ಹೌದು, ತಪ್ಪುಗಳನ್ನು ಮಾಡುವ ಬಗ್ಗೆ ನಟ ತಲ್ಲುಲಾ ಬ್ಯಾಂಕ್‌ಹೆಡ್ ಅವರ ಉಲ್ಲೇಖವನ್ನು ಹೊಂದಿರುವ ಪುಸ್ತಕದ ಫೋಟೋವನ್ನು ಶಿಲ್ಪಾ ತಮ್ಮ ಒಂದು ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ. ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಜಾಮೀನು ಪಡೆದ ತಿಂಗಳುಗಳ ನಂತರ ಇತ್ತೀಚೆಗೆ ಕ್ರಿಸ್‌ಮಸ್ ದಿನದಂದು ಶಿಲ್ಪಾ ಪತಿಯೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದರು. ಶಿಲ್ಪಾ ಕೊನೆಯದಾಗಿ 'ಹಂಗಾಮಾ 2' ಸಿನಿಮಾದಲ್ಲಿ ಮೀಜಾನ್, ಪ್ರಣಿತಾ ಸುಭಾಷ್ ಮತ್ತು ಪರೇಶ್ ರಾವಲ್ ಜತೆ ಕಾಣಿಸಿಕೊಂಡಿದ್ದರು. ಮುಂದೆ, ನಟಿ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ಜತೆಗೆ ಸಬ್ಬೀರ್ ಖಾನ್ ಅವರ 'ನಿಕಮ್ಮ' ಚಿತ್ರದಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ.