ಹೊಸ ವರ್ಷಕ್ಕೆ ಹಾಟ್ ಸಮಂತಾಳ ಹೊಸ ಸಂಕಲ್ಪ! ವಿಡಿಯೋ ವೈರಲ್

Published on
2021ರಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಂತ ಎಲ್ಲಿ ನೋಡಿದರೂ ಬರೀ ನಟಿ ಸಮಂತಾಳ ಬಗ್ಗೆಯೇ ಚರ್ಚೆಗಳು ಕೇಳಿಬಂದವು. ಸಮಂತಾ ಅವರ ವಿಚ್ಛೇದನ ವಿಷಯವಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದ್ದು ಬಹಳಷ್ಟು ಬೇಸರ ಗೊಂಡಿದ್ದರು. ಆದರೂ, ತಮ್ಮ ನೋವಿನಿಂದ ಹೊರಬಂದು ನಂತರ ''ಪುಷ್ಪ'' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿ ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದರು. ಸಮಂತಾಳ ಐಟಂ ಹಾಡಿನ ಬೋಲ್ಡ್ ಲುಕ್ ಮತ್ತು ಆ ಹಾಡಿನ ಸಾಹಿತ್ಯದಿಂದಲೂ ವಿವಾದಕ್ಕೆ ಸಿಲುಕಿದ್ದರು. ನಂತರ, 20 ದಿನ ಜ್ವರದಿಂದ ಬಳಲಿ ಈಗ ಚೇತರಿಸಿಕೊಂಡಿದ್ದಾರೆ. ಇದೇ ಕಾರಣಗಳಿಗೆ ಸಮಂತಾ ಬದುಕಿನಲ್ಲಿ 2021 ವರ್ಷವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದೇ ಹೇಳಬೇಕು. ಆದರೆ, ಇಷ್ಟೆಲ್ಲಾ ನಡೆದ ನಂತರವೂ ಧೃತಿಗೆಡದೆ ನಟಿ ಸಮಂತಾ 2022ರನ್ನು ಎದುರಿಸಲು ರೆಡಿಯಾಗಿದ್ದಾರೆ.
ಹೌದು, 2021ರಲ್ಲಿ ತಾವು ಅನುಭವಿಸಿದ ಎಲ್ಲಾ ನೋವನ್ನ ಮರೆತು ಹೊಸ ವರ್ಷದಿಂದ ತನ್ನ ಹೊಸ ಬದುಕಿಗೆ ಮುನ್ನುಡಿ ಬರೆಯಲು ಸಮಂತಾ ಸಜ್ಜಾಗಿದ್ದಾರಂತೆ. ಅದು ಹೇಗೆ ಅಂತೀರಾ...? ನಟಿ ಈಗ ಬ್ಯಾಕ್ ಟು ಜಿಮ್ ಅಂತೆ. ಸಮಂತಾ ಜಿಮ್​ನಲ್ಲಿ ಪ್ರತಿದಿನ ಫುಲ್ ವರ್ಕ್ಔಟ್ ಮಾಡಲು ಆರಂಭಿಸಿದ್ದಾರೆ. ಹೀಗೆ, ಸಮಂತಾ ಜಿಮ್​ನಲ್ಲಿ ಹಾಟ್ ಉಡುಪುಗಳು ಧರಿಸಿ ವರ್ಕ್ಔಟ್ ಮಾಡುತ್ತಿರುವ ಒಂದಿಷ್ಟು ಫೋಟೋಗಳು, ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಮಂತಾ ಗೇರಿಂಗ್ ಅಪ್ ಫಾರ್ 2022 ಎಂದು ನಟಿಯ ಕಟ್ಟಾಭಿಮಾನಿಗಳು ಕಾಮಿಂಟ್ ಮಾಡಿ ಫುಲ್ ದಿಲ್ ಖುಷ್ ಆಗಿದ್ದಾರೆ. ಅಭಿಮಾನಿಗಳು ಪ್ರೀತಿಯಾಗಿ ಸ್ಯಾಮ್ ಎಂದು ಕರೆಯುವ ನಟಿ ಜಿಮ್​ನಲ್ಲಿ ವರ್ಕ್ಔಟ್ ಮಾಡುತ್ತಿರುವ ವಿಧಾನ ಕಂಡರೆ ಬಹುತೇಕ ಎಲ್ಲರಿಗೂ ಅವರು ಯಾವುದೋ ಧೃಡವಾದ ಹೊಸ ಸಂಕಲ್ಪ ಮಾಡಿರುವ ಹಾಂಗೆ ಕಾಣುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net