ರಾಯನ್​ ಸಿನಿಮಾದ ಧನುಷ್ ಸಹೋದರಿ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ! ಹಾಟ್​​ ಫೋಟೋಗಳು ವೈರಲ್ | Raayan

Raayan
Published on

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ಧನುಷ್ ( Dhanush ) ತಾವೇ ನಿರ್ದೇಶಿಸಿ, ನಟಿಸಿದ ರಾಯನ್ ( Raayan ) ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಬಹಳ ಸದ್ದು ಮಾಡಿತು. ಈ ಸಿನಿಮಾ ಧನುಷ್​ ಅವರ 50ನೇ ಚಿತ್ರ. ಧನುಷ್ ಸಹೋದರಿಯಾಗಿ ನಟಿಸಿರುವ ದುಶಾರಾ ವಿಜಯನ್ ( Dushara Vijayan ) ಅವರು ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ರಾಯನ್ ಸಿನಿಮಾದ ಮೂಲಕ ಒಮ್ಮೆಲೇ ಫೇಮಸ್ ಆಗಿದ್ದು, ಪ್ರಸ್ತುತ ರಜನಿಕಾಂತ್ ಅವರ ವೆಟ್ಟೈಯಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಯನ್​ ಸಿನಿಮಾದಲ್ಲಿ ಬಡ ಸಹೋದರಿಯ ಪಾತ್ರದಲ್ಲಿ ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದ ದುಶಾರಾ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಹಾಟ್​ ಎಂಬುದು ಅವರ ಇನ್​ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಗೊತ್ತಾಗುತ್ತದೆ. 8 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿರುವ ದುಶಾರಾ ಸಖತ್​ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡಿದ್ದು, ರಾಯನ್​ ಚಿತ್ರದಲ್ಲಿ ಅವರನ್ನು ಮೊದಲ ಬಾರಿ ನೋಡಿದವರಿಗೆ ಖಂಡಿತ ಅಚ್ಚರಿಯಾಗುತ್ತದೆ. ತುಂಡುಡುಗೆ ಫೋಟೋದಿಂದ ಹಿಡಿದು ಬಿಕಿನಿ ಫೋಟೋವರೆಗೂ ದುಶಾರಾ ಪೋಸ್ಟ್​ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ವೆಟ್ಟೈಯಾನ್ ಸಿನಿಮಾ ದಸರಾ ಹಬ್ಬದಂದು ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ದುಶಾರಾ ವಿಜಯನ್​, ಧನುಷ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ತನಗೆ ಧನುಷ್​ ಅಂದರೆ ತುಂಬಾ ಇಷ್ಟವೆಂದು ಹೇಳಿದ್ದಾರೆ. ಇಂಡಸ್ಟ್ರಿಗೆ ಬರುವ ಮುನ್ನವೇ ನಾನು ಅವರ ಅಭಿಮಾನಿಯಾಗಿದ್ದೆ ಎಂದಿದ್ದಾರೆ. ನಾನು ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದು ಧನುಷ್ ತುಂಬಾ ಖುಷಿಪಟ್ಟಿದ್ದಾರೆ ಎಂದರು.

ಒಂದು ದಿನ ಧನುಷ್ ಅವರು ನನ್ನ ಬಳಿ ಬಂದರು. ರಜನಿಕಾಂತ್ ಸರ್ ಜೊತೆ ನಟಿಸಿದ್ದೀರಾ? ಎಂದು ಕೇಳಿದರು. ಅದಕ್ಕೆ ನಾನು ಹೌದು ಎಂದೆ. ಬಳಿಕ ಅವರು ನಾನೇ ಇನ್ನೂ ಅವರೊಂದಿಗೆ ನಟಿಸಿಲ್ಲ, ಇಷ್ಟು ಬೇಗ ನೀವು ಅವಕಾಶ ಪಡೆದುಕೊಂಡುಬಿಟ್ಟೆಯಾ ಎಂದರು. ರಜನಿಕಾಂತ್‌ ಅಂದರೆ ಅವರಿಗೆ ಎಷ್ಟು ಇಷ್ಟ ಎಂಬುದು ಅಂದೇ ನನಗೆ ಅರಿವಾಯಿತು ಎಂದು ದುಶಾರಾ ವಿಜಯನ್​ ಅವರು ಹೇಳಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: ಆಫರ್​ ನೋಡಿದ ಕೂಡಲೇ ಆನ್​ಲೈನ್​ನಲ್ಲಿ ಆರ್ಡರ್​ ಮಾಡ್ತೀರಾ? ಇಲ್ಲಿದೆ ನೋಡಿ ಆಘಾತಕಾರಿ ಮಾಹಿತಿ | Online Order

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net