ನಟಿ ಸಮಂತಾ ರುತ್ ಪ್ರಭು ಕೇವಲ ಅವರ ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಹೃದಯಗಳನ್ನು ಆಳುವುದಲ್ಲದೇ, ಅವರ ಫಿಟ್ನೆಸ್ ಕೂಡ ಅವರ ಅಭಿಮಾನಿಗಳನ್ನು ತುಂಬಾ ಆಕರ್ಷಿಸುತ್ತದೆ. ಆದರೆ, ಸ್ಯಾಮ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ನಟಿ ಸಮಂತಾ ತನ್ನ ಬೋಲ್ಡ್ ಡ್ರೆಸ್ಸಿಂಗ್ ಸೆನ್ಸ್ಗೂ ಎಲ್ಲರ ಹುಬ್ಬೇರಿಸುತ್ತಾರೆ. ಇತ್ತೀಚೆಗೆ, ನಟಿ ಸಮಂತಾ ಬಹಳಷ್ಟು ಫೋಟೋ ಶೂಟ್ಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ನಟಿಯ ಫೋಟೋ ಶೂಟ್ಗಳಲ್ಲಿ ಧರಿಸುವ ಉಡುಪುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಗೆಯೇ, ಈಗ ನಟಿಯ ಒಂದು ಫೋಟೋ ಶೂಟ್ನ ಬೋಲ್ಡ್ ಉಡುಪು, ಸದ್ಯ ಎಲ್ಲರ ಗಮನ ಸೆಳೆದಿದೆ.