ಶೋಭಿತಾ ಜತೆ ಮಾಜಿ ಪತಿ ನಾಗಚೈತನ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಶಾಕಿಂಗ್​ ನಿರ್ಧಾರ ತೆಗೆದುಕೊಂಡ ಸಮಂತಾ!?

Samantha
Published on

ಹೈದರಾಬಾದ್​: ಪ್ಯಾನ್​ ಇಂಡಿಯಾ ಬ್ಯೂಟಿ ಸಮಂತಾ, ತೆಲುಗು ಚಿತ್ರರಂಗದಲ್ಲಿ ಉತ್ತಮ ಹೆಸರು ಹೊಂದಿರುವ ಸ್ಟಾರ್ ನಾಯಕಿಯರಲ್ಲಿ ಒಬ್ಬರು. ಸ್ಯಾಮ್ ಸದ್ಯಕ್ಕೆ ಪ್ಯಾನ್ ಇಂಡಿಯಾ ಸಿನಿಮಾಗಳು ಮತ್ತು ವೆಬ್ ಸರಣಿಗಳ ಕಡೆ ಗಮನ ಹರಿಸಿದ್ದಾರೆ. ವೃತ್ತಿ ಜೀವನದಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮತ್ತೆ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡಲು ಶುರು ಮಾಡಿರುವ ಸ್ಯಾಮ್ ಕೈಯಲ್ಲಿ ಈಗ ಹಲವಾರು ದೊಡ್ಡ ಪ್ರಾಜೆಕ್ಟ್​ಗಳಿವೆ.

ಸಿನಿಮಾ ಸುದ್ದಿಗಳು ಒಂದೆಡೆಯಾದರೆ, ಸಮಂತಾರ ಮಾಜಿ ಪತಿ ನಾಗಚೈತನ್ಯ ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತೇ ಇದೆ. ಶೀಘ್ರದಲ್ಲೇ ನಾಗಚೈತನ್ಯ ಎರಡನೇ ಮದುವೆ ಆಗಲಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನಾಗಚೈತನ್ಯ ಜತೆ ಸಮಂತಾ ಹೆಸರು ಕೂಡ ಹೆಚ್ಚೆಚ್ಚು ಪ್ರಸ್ತಾಪವಾಗುತ್ತಿದೆ. ಸಮಂತಾ ಎರಡನೇ ಮದುವೆ ಯಾವಾಗ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ನಡುವೆಯೇ ಸಮಂತಾ ಅವರು ಶಾಕಿಂಗ್​ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಅದೇನೆಂದರೆ, ತೆಲುಗು ಚಿತ್ರಗಳಿಂದಲೇ ದೂರ ಉಳಿಯಲು ಸಮಂತಾ ನಿರ್ಧರಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಪ್ರಸ್ತುತ ಸಮಂತಾ ಅವರು ತೆಲುಗಿನಲ್ಲಿ "ಮಾ ಇಂಟಿ ಬಂಗಾರಂ" ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಿಟ್ಟರೆ ತೆಲುಗಿನಲ್ಲಿ ಮತ್ತೆ ಸಿನಿಮಾ ಮಾಡಬಾರದು ಎಂದು ನಿರ್ಧರಿಸಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ನೆಗೆಟಿವಿಟಿಯೇ ಈ ನಿರ್ಧಾರಕ್ಕೆ ಕಾರಣ ಎಂಬ ಗುಸುಗುಸು ಸಹ ಶುರುವಾಗಿದೆ. ವಿಚ್ಛೇದನಾ ಬಳಿಕ ಸಮಂತಾ ವಿರುದ್ಧ ಸಾಕಷ್ಟು ನೆಗೆಟಿವಿಟಿ ಹರಡಲಾಗುತ್ತಿದ್ದು, ಇದರಿಂದ ಮನನೊಂದಿರುವ ಸ್ಯಾಮ್ ತೆಲುಗು ಸಿನಿಮಾ ಮಾಡುವುದನ್ನು ನಿಲ್ಲಿಸಲು ಬಯಸಿದ್ದಾರೆ ಎನ್ನಲಾಗಿದೆ.

ಆದರೆ, ಮತ್ತೊಂದೆಡೆ ಬೇರೊಂದು ಚರ್ಚೆಯು ನಡೆಯುತ್ತಿದೆ. ತೆಲುಗಿನಿಂದ ಸಮಂತಾಗೆ ಯಾವುದೇ ಆಫರ್‌ಗಳು ಇರದ ಕಾರಣ ಸಿನಿಮಾ ಮಾಡುತ್ತಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಂದಹಾಗೆ ಸಮಂತಾಗೆ ಸ್ಟಾರ್ ಸ್ಟೇಟಸ್ ಕೊಟ್ಟಿದ್ದು ತೆಲುಗು ಸಿನಿಮಾಗಳು. ಇಲ್ಲಿಂದ ಸಮಂತಾ ಸ್ಟಾರ್ ಆಗಿ ಬೆಳೆದು ಪ್ಯಾನ್ ಇಂಡಿಯಾಕ್ಕೂ ಹೋಗಿದ್ದಾರೆ. ಹೀಗಾಗಿ ಸಮಂತಾ ತೆಲುಗು ಚಿತ್ರಗಳಿಂದ ಹೊರ ಹೋಗುತ್ತಿದ್ದಾರೆ ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ.

ಈ ವದಂತಿಗಳಿಗೆ ಸಮಂತಾ ಬ್ರೇಕ್​ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಸಮಂತಾ ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ "ಸಿಟಾಡೆಲ್ ಹನಿ ಬನ್ನಿ" ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಬಾಲಿವುಡ್ ನಟ ವರುಣ್ ಧವನ್ ಜತೆ ನಟಿಸಿದ್ದಾರೆ. ಈ ಸರಣಿಯು ಹಾಲಿವುಡ್ ವೆಬ್ ಸರಣಿ ಸಿಟಾಡೆಲ್‌ನ ರೀಮೇಕ್ ಆಗಿದೆ. ಇದರ ಹೊರತಾಗಿ ಮತ್ತೊಂದೆಡೆ ಅಗ್ರ ಒಟಿಟಿ ಕಂಪನಿ ನೆಟ್‌ಫ್ಲಿಕ್ಸ್‌ನೊಂದಿಗೆ "ರಕ್ತ ಬ್ರಹ್ಮಾಂಡ" ಎಂಬ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ. ಈ ಸರಣಿಯನ್ನು "ತುಂಬದ್" ಖ್ಯಾತಿಯ ನಿರ್ದೇಶಕ ಅನಿಲ್ ರಾಹಿ ಬರ್ವೆ ನಿರ್ದೇಶಿಸಿದ್ದಾರೆ. ಇದರಲ್ಲೂ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net