ಮರೂನ್ ಫುಲ್ ಸ್ಲೀವ್ ಟಿ-ಶರ್ಟ್ಗಳು ಮತ್ತು ಡೆನಿಮ್ ಜೀನ್ಸ್ನಲ್ಲಿ ನಟನ ಜೊತೆ ಟ್ವಿನಿಂಗ್ ಆಗಿರುವ ನಟಿ ಜೆನಿಲಿಯಾ, ಸಲ್ಮಾನ್ ಜೊತೆ ತುಂಬಾನೆ ಉತ್ಸಾಹದಿಂದ ಒಟ್ಟಿಗೆ ನೃತ್ಯ ಮಾಡಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ, ಪನ್ವೆಲ್ನಲ್ಲಿರುವ ಸಲ್ಮಾನ್ನ ಫಾರ್ಮ್ಹೌಸ್ನಲ್ಲಿ ಅವರ ಹುಟ್ಟುಹಬ್ಬದಂದು ತೆಗೆದಿರುವ ವಿಡಿಯೋ ಇದು. ಒಂದೊಳ್ಳೆ ಟ್ರ್ಯಾಕ್ಗೆ ಸಲ್ಮಾನ್, ಜೆನಿಲಿಯಾ ಹೆಜ್ಜೆ ಹಾಕಿರುವುದು ಕಂಡುಬಂದಿದೆ. ವಿಡಿಯೋದ ಜೊತೆಗೆ ಜೆನಿಲಿಯಾ, “ಒಳ್ಳೆಯ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸಂತೋಷ, ಪ್ರೀತಿ, ಉತ್ತಮ ಆರೋಗ್ಯವನ್ನು ನೀಡಲಿ.” ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋದಲ್ಲಿ ಸಲ್ಮಾನ್ ದಿಲ್ ಖುಷ್ ಆಗಿ ಕುಣಿದಿರುವುದು ಕಂಡ ಕಟ್ಟಾಭಿಮಾನಿಗಳು, ಎಲ್ಲರಿಗೂ ಸಂತೋಷ ತಂದಿದೆ. ಇದಲ್ಲದೇ, ಈ ವಿಡಿಯೋದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ. ವಿಡಿಯೋ ಮೇಲೆ ಬರೋಬ್ಬರಿ 1 ಮಿಲಿಯನ್ಗೂ ಹೆಚ್ಚು ಲೈಕ್ಸ್ ಇದ್ದು, ವಿಡಿಯೋ ವೀಕ್ಷಣೆಗಳು ಅಂತೂ 4 ಮಿಲಿಯನ್ಗೂ ಹೆಚ್ಚು ಇದೆ.