ಸಾಯಿ ಪಲ್ಲವಿ... ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿದ ಹೆಚ್ಚಿಸುತ್ತದೆ. ಇತ್ತೀಚೆಗೆ, ನ್ಯಾಚುರಲ್ ಸ್ಟಾರ್ ನಟ ನಾನಿ ಜೊತೆಗೆ ತೆಲುಗಿನ 'ಶ್ಯಾಮ್ ಸಿಂಘ ರಾಯ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಇಂಡಸ್ಟ್ರಿಯಲ್ಲಿ ಚಿರಪರಿಚಿತರು. ಪಲ್ಲವಿ ಅನೇಕ ಸ್ಟಾರ್ ನಾಯಕ ನಟರೊಂದಿಗೆ ನಟಿಸಿದ್ದು, ತಮ್ಮ ಸರಳ ವ್ಯಕ್ತಿತ್ವ ಮತ್ತು ಡಿ-ಗ್ಲಾಮರಸ್ ರೋಲ್ಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಎನ್ನಬಹುದು. ಅಂತಹ ನಟಿ, ಇತ್ತೀಚಿನ ಸಂದರ್ಶನವೊಂದರಲ್ಲಿ, ಗ್ಲಾಮರಸ್ ಪ್ರಪಂಚ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ತಮ್ಮ ಬಯಕೆಯ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಸದ್ಯದಲ್ಲೇ, ನಟಿ ಹಿಂದಿಗೆ ಪಾದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ ಎಂಬಂತೆ ಕಾಣುತ್ತಿದೆ.