ಕೆಜಿಎಫ್​ ಚಿತ್ರತಂಡಕ್ಕೆ ಅಭಿಮಾನಿಗಳ ಈ ಬೇಡಿಕೆ; ಈಡೇರಿಸುತ್ತಾರಾ ನಿರ್ದೇಶಕರು​?

collage (19)
Published on

ಕೆಜಿಎಫ್​ ಚಾಪ್ಟರ್ 2 ಬಿಡುಗಡೆಗೆ ನಾಲ್ಕು ತಿಂಗಳಷ್ಟೇ ಬಾಕಿ. ಹಾಗಾಗಿ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಆದರೆ, ಆ ಕುತೂಹಲಕ್ಕೆ ಚಿತ್ರತಂಡ ಮಾತ್ರ ಪ್ರತಿಯಾಗಿ ಏನನ್ನೂ ನೀಡುತ್ತಿಲ್ಲ. ಅಭಿಮಾನಿಗಳು ಕಾದಿದ್ದೇ ಬಂತು, ಯಾವುದೇ ಅಪ್​ಡೇಟ್​ ಮಾಹಿತಿ ಲಭ್ಯವಾಗುತ್ತಿಲ್ಲ. ಹಾಗಾಗಿ ಇದೆಲ್ಲವನ್ನು ನೋಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್​ ಬಿಡುಗಡೆಗೆ ಆಗ್ರಹಿಸಿ ಅಭಿಯಾನವನ್ನೇ ಆರಂಭಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರಿಗೆ ಹಲವು ಅಭಿಮಾನಿ ಸಂಘಗಳಿದ್ದು, ಆ ಸಂಘಗಳೆಲ್ಲಾ ಟ್ರೇಲರ್​ ಬಿಡುಗಡೆಯ ದಿನಾಂಕವನ್ನು ಘೋಷಿಸಿ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್‌ಗೆ ಮನವಿ ಮಾಡಿಕೊಂಡಿವೆ.

ಯಶ್ ಅಭಿಮಾನಿಗಳ ಈ ಮನವಿಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚಿತ್ರ ಬಿಡುಗಡೆಯಾಗುವುದಕ್ಕೆ ಇನ್ನೂ ನಾಲ್ಕು ತಿಂಗಳು ಇರುವುದರಿಂದ, ಈ ಲಾಕ್‌ಡೌನ್ ಮುಗಿದು ಪರಿಸ್ಥಿತಿ ಸ್ವಲ್ಪ ತಿಳಿಯಾದ ಮೇಲೆ ಟ್ರೇಲರ್​ ಬಿಡುಗಡೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಯಶ್ ಅಭಿಮಾನಿಗಳ ಈ ಮನವಿಗೆ ಚಿತ್ರತಂಡ, ಏನು ಉತ್ತರ ನೀಡುತ್ತದೋ ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net