More

    VIDEO| ಹಾಸ್ಯಮಯ ವಿಡಿಯೋದೊಂದಿಗೆ ಕರೊನಾ ವದಂತಿಗೆ ಬ್ರೇಕ್​ ಹಾಕಿದ ನಯನತಾರಾ-ವಿಘ್ನೇಶ್!

    ಚೆನ್ನೈ: ಬಹುಭಾಷಾ ನಟಿ ನಯನತಾರಾ ಹಾಗೂ ಭಾವಿ ಪತಿ ವಿಘ್ನೇಶ್​ ಶಿವನ್​ಗೂ ಕರೊನಾ ಪಾಸಿಟಿವ್​ ಇದೆ ಎಂಬ ವದಂತಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರ ಇಬ್ಬರ ಕಿವಿಗೂ ಬಿದ್ದಿದ್ದು, ಹಾಸ್ಯಸ್ಪದ ವಿಡಿಯೋ ಮೂಲಕವೇ ವದಂತಿಗೆ ತೆರೆ ಎಳೆದಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ವಿಘ್ನೇಶ್​, ಡಿಯರ್​ ಕರೊನಾ ಮತ್ತು ನಮ್ಮ ಸಾವಿನ ಚಿತ್ರಗಳನ್ನೊಳಗೊಂಡ ಅದ್ಭುತ ವಿನ್ಯಾಸಭರಿತ ಸುದ್ದಿಗಳನ್ನು ನಾವು ನೋಡಿದ್ದೇವೆ. ಹಾಯ್​…. ನಾವಿನ್ನೂ ಜೀವಂತವಾಗಿದ್ದೇವೆ ಮತ್ತು ಆರೋಗ್ಯಯುತವಾಗಿದ್ದೇವೆ. ಸಿಲ್ಲಿ ಜೋಕ್ಸ್​ ಮತ್ತು ಎಲ್ಲ ಜೋಕರ್ಸ್​ಗಳ ಕಲ್ಪನೆಯನ್ನು ನೋಡುವ ಶಕ್ತಿ ಹಾಗೂ ಸಂತೋಷವನ್ನು ದೇವರು ನಮಗೆ ನೀಡಿದ್ದಾನೆ ಎಂದು ವಿಡಿಯೋವೊಂದನ್ನು ಪೋಸ್ಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿ ವಿರುದ್ಧ ಆಕ್ರೋಶ!

    ವಿಡಿಯೋದಲ್ಲಿ ಏನಿದೆ?: ಪ್ರಖ್ಯಾತ “ಬೇಬಿ ಶಾರ್ಕ್”​ ಸಾಂಗ್​ಗೆ ನಯನಾ ಮತ್ತು ವಿಘ್ನೇಶ್ ತಲೆಯಾಡಿಸಿದ್ದಾರೆ. ತಮ್ಮ ಮುಖಗಳಿಗೆ ಟಿಕ್​ಟಾಕ್​ನ ವಿಡಿಯೋ ಫಿಲ್ಟರ್​ ಅಳವಡಿಸಿ ಮಕ್ಕಳ ರೀತಿ ಕಾಣುವಂತೆ ಹಾಡಿಗೆ ತಲೆಯಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಇಬ್ಬರಿಗೂ ಕರೊನಾ ಇರುವ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದಂತೆ, ನಯನತಾರಾ ಮತ್ತು ವಿಘ್ನೇಶ್​ ಆಪ್ತರಿಗೆ ಕರೆ ಮಾಡಿ ಕೇಳಿದಾಗ, ಅವರಿಂದ ಬಂದ ಉತ್ತರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ನಯನತಾರಾ ಮತ್ತು ವಿಘ್ನೇಶ್​ ಕ್ಷೇಮವಾಗಿದ್ದಾರೆ. ಅವರಿಗೆ ಆ ಥರದ ರೋಗಲಕ್ಷಣಗಳಾಗಲಿ ಯಾವುದೂ ಕಂಡು ಬಂದಿಲ್ಲ. ಈ ರೀತಿಯ ಗಾಳಿಸುದ್ದಿಯನ್ನು ನಂಬಬೇಡಿ’ ಎಂದಿದ್ದರು. ಆ ಮಾತು ಕೇಳಿದ ಬಳಿಕವಷ್ಟೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!

    ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್​ಗೂ ಕರೊನಾ ಪಾಸಿಟಿವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts